ಹೆದರಕ್ಕೆ ಸಿಎಂ ಸಿದ್ದರಾಮಯ್ಯ ಏನ್ ದೆವ್ವನಾ: ಎಚ್‌ಡಿ ಕುಮಾರಸ್ವಾಮಿ

Sampriya
ಶನಿವಾರ, 5 ಅಕ್ಟೋಬರ್ 2024 (14:56 IST)
ಬೆಂಗಳೂರು: ಕುಮಾರಸ್ವಾಮಿಗೆ ನನ್ನನ್ನು ಕಂಡರೆ ಭಯ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು, ಸಿಎಂ ಏನ್ ದೆವ್ವನಾ ನಾನು ಹೆದರೋಕೆ ಎಂದು ಕೌಂಟರ್ ನೀಡಿದ್ದಾರೆ.

ಸಿದ್ದರಾಮಯ್ಯನಂತಹ ಲಕ್ಷ ಜನ ಬಂದರೂ ನಾನು ಹೆದರುವುದಿಲ್ಲ. ನಾನು ಸಿದ್ದರಾಮಯ್ಯ ನೆರಳಿನಲ್ಲಿ ಆಗಲಿ, ಹೆಸರಿನಲ್ಲಿ ಆಗಲಿ ನಾನು ರಾಜಕೀಯಕ್ಕೆ ಬಂದಿರುವುದಲ್ಲ. ಸ್ವಂತ ದುಡಿಮೆಯಲ್ಲಿ, ಕಾರ್ಯಕರ್ತರ ದುಡಿಮೆಯಲ್ಲಿ ಈ ಮಟ್ಟಕ್ಕೆ ಬೆಳೆದಿದ್ದೇನೆ. ದೇವೇಗೌಡರ ನೆರಳಿನಲ್ಲಿ ರಾಜಕೀಯಕ್ಕೆ ಬಂದಿರುವ ನಾನು, ನಾಡಿನ ಜನರಿಗಷ್ಟೇ ಹೆದರುತ್ತೇನೆ ಎಂದರು.

ಸಿಎಂ ಏನಾದರೂ ದೆವ್ವ ಆಗಿದ್ದರೆ ಹೆದರಬೇಕಿತ್ತು. ಅವರೇನು ದೆವ್ವ ಅಲ್ವಲ್ಲ, ಹಾಗಾಗಿ ನಾನ್ಯಾಕೆ ಭಯ ಬೀಳಲಿ ಎಂದರು. ನನ್ನ ಜೆಡಿಎಸ್ ದುರ್ಬಲ ಆಗುತ್ತೋ ಬಲಗೊಳ್ಳುತ್ತೋ ಎನ್ನುವುದನ್ನು ದೇವರು ನೋಡಿಕೊಳ್ಳುತ್ತಾನೆ. ಮೊದಲು ಸಮಸ್ಯೆಯಲ್ಲಿರುವುದನ್ನು ಬಗೆಹರಿಸಿಕೊಳ್ಳಿ. ಕುಮಾರಸ್ವಾಮಿ ಹೆದರುವುದು ಕೇವಲ ದೇವರಿಗೆ ಮತ್ತು ಜನರಿಗೆ ಮಾತ್ರ ಎಂದರು.

ಕುಮಾರಸ್ವಾಮಿ ಹತ್ತಿರ ಇವರದು ಏನು ನಡೆಯಲ್ಲ. ಎಫ್‌ಐಆರ್ ಮಾಡಿ ಹೆದರಿಸುವ ಕೆಲಸ ಅಷ್ಟೇ. ಕಾಲ ಪ್ರತಿಯೊಂದಕ್ಕೂ ಉತ್ತರ ನೀಡಲಿದೆ. ಕಾಂಗ್ರೆಸ್ ಸರ್ಕಾರಕ್ಕೆ ಭಯ, ಭಕ್ತಿ ಯಾವುದು ಇಲ್ಲದ ಭಂಡ ಸರ್ಕಾರ ಎಂದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ಹೋರಾಟ: ಬಿ.ಕೆ.ಹರಿಪ್ರಸಾದ್

ಜಂತರ್ ಮಂತರ್‌ನಲ್ಲಿನ ಕ್ರಮ ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ: ಕೇಂದ್ರದ ವಿರುದ್ಧದ ಖರ್ಗೆ ಗರಂ

ಜೈಶ್ ಎ ಮೊಹಮ್ಮದ್ ಸಂಘಟನೆ ಜತೆ ನಂಟು, ಬಂಧಿತರ ಸಂಖ್ಯೆ 13ಕ್ಕೆ ಏರಿಕೆ

ಬಟ್ಟೆ ಬಿಚ್ಚಿ ಸಹಕಾರ ಕೊಡಿ, ಇಲ್ಲದಿದ್ದರೆ 500 ರೂ ಕೊಟ್ಟು ಹೋಗ್ತಾ ಇರಿ: ಶಿಕ್ಷಕಿಯ ಆರ್ಡರ್ ಗೆ ಬಾಲಕಿಯರು ಶಾಕ್ video

Gold Price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಮುಂದಿನ ಸುದ್ದಿ
Show comments