ಸಿಎಂ ಪೂಜೆ ಸಲ್ಲಿಕೆ ನಂತರ ಬೆಟ್ಟದಿಂದ ತೆರಳಲಿರುವ ಉತ್ಸವ ಮೂರ್ತಿ, ವಿಜಯ ದಶಮಿ ಮೆರವಣಿಗೆಯಲ್ಲಿ ಭಾಗಿಯಾಗಲಿದೆ. ಬೆಳ್ಳಿ ರಥದಲ್ಲಿ ಮೆರವಣಿಗೆ ಮೂಲಕ ಉತ್ಸವ ಮೂರ್ತಿಯನ್ನು ತೆಗೆದುಕೊಂಡು ಹೋಗಲಾಗುತ್ತದೆ.
ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿದ ನಂತರ ಭಕ್ತರ ಬಳಿ ತೆರಳಿದ ಸಿಎಂ ದೇವಾಲಯದ ಎರಡೂ ಬದಿಯಲ್ಲಿದ್ದ ಭಕ್ತರತ್ತ ಕೈ ಬೀಸಿದರು. ಹೂವು ಹಣ್ಣು ಮಾರುವ ಮಹಿಳೆ ಬಳಿ ʼವ್ಯಾಪಾರ ಹೇಗೆ ನಡೀತಿದೆ? ಪರವಾಗಿಲ್ವಾ, ಈಗ ಎಷ್ಟು ಮಾರಾಟ ಮಾಡ್ತಿದ್ದೀರಿ?ʼ ಎಂದು ವಿಚಾರಿಸಿದರು. ಪೂಜೆಗೆ ಹಣ್ಣು ಕಾಯಿ 100 ರೂ. ಎಂದ ಮಹಿಳೆಯ ಬಳಿ ʼಜಾಸ್ತಿ ಮಾಡ್ಬಿಟ್ಟೀರಾ?ʼ ಎಂದು ಪ್ರಶ್ನಿಸಿದರು. ʼʼಇಲ್ಲಣ್ಣʼʼ ಎಂದರು ಮಹಿಳೆ.