Webdunia - Bharat's app for daily news and videos

Install App

ನಾನು ಯಾವುದೇ ಜಾತಿ, ಭಾಗಕ್ಕೆ ಮಾತ್ರ ಮುಖ್ಯಮಂತ್ರಿಯಾಗಿಲ್ಲ: ಸಿಎಂ ಎಚ್ ಡಿಕೆ

Webdunia
ಸೋಮವಾರ, 9 ಜುಲೈ 2018 (11:43 IST)
ಬೆಂಗಳೂರು: ಬಜೆಟ್ ಮೇಲಿನ ಪ್ರಶ್ನೋತ್ತರ ಕಲಾಪ ವಿಧಾನಸಭೆಯಲ್ಲಿ ಆರಂಭಗೊಂಡಿದ್ದು, ಸಿಎಂ ಎಚ್ ಡಿ ಕುಮಾರಸ್ವಾಮಿ ವಿಪಕ್ಷ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಿಎಂ ಕುಮಾರಸ್ವಾಮಿ ತಮ್ಮ ಮೇಲಿನ ತಾರತಮ್ಯ ಆರೋಪಕ್ಕೆ ತಿರುಗೇಟು ನೀಡಿದ್ದು ನಾನು ಯಾವುದೇ ಜಾತಿ, ಭಾಗಕ್ಕೆ ಮಾತ್ರ ಮುಖ್ಯಮಂತ್ರಿಯಾಗಿಲ್ಲ ಎಂದಿದ್ದಾರೆ. ಸಿಎಂ ಹೀಗೆ ಹೇಳುತ್ತಿದ್ದಂತೇ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

‘ನಾನು ಯಾವುದೋ ಒಂದು ಭಾಗಕ್ಕೆ ಮುಖ್ಯಮಂತ್ರಿಯಾಗಿಲ್ಲ. ಹಾಸನಕ್ಕೆ ರಿಂಗ್ ರೋಡ್ ನಿರ್ಮಿಸಲು 30 ಕೋಟಿ ರೂ. ಕೊಟ್ಟಿದ್ದೇನೆಂದರೆ ಆಕ್ಷೇಪ ವ್ಯಕ್ತಪಡಿಸುತ್ತೀರಿ. ಹಾಸನದಲ್ಲಿ ನಾನಾ ಶಾಸಕ? ಬಿಜೆಪಿಯವರು ಶಾಸಕರು. ನಿಮಗೆ ಬೇಡ್ವಾ? ಬೇಡಾಂದ್ರೆ ಕೊಡಿ, ಅದನ್ನೇ ಉತ್ತರ ಕರ್ನಾಟಕಕ್ಕೆ ಕೊಡ್ತೀನಿ. ಯಾವ ಭಾಗಕ್ಕೆ ಯಾವ ಸರ್ಕಾರದ ಅವಧಿಯಲ್ಲಿ ಎಷ್ಟೆಷ್ಟು ಖರ್ಚು ಮಾಡಲಾಗಿದೆ ಎನ್ನುವುದು ಈ ಸದನದಲ್ಲೇ ಚರ್ಚೆಯಾಗಲಿ’ ಎಂದು ಸಿಎಂ ಕುಮಾರಸ್ವಾಮಿ ಸವಾಲು ಹಾಕಿದರು. ಸಿಎಂ ಸವಾಲಿಗೆ ಪ್ರತಿಪಕ್ಷ ಬಿಜೆಪಿ ಸದಸ್ಯರು 50 ವರ್ಷಗಳ ಸಾಧನೆಗಳು ಚರ್ಚೆಯಾಗಲಿ ಎಂದು ಪ್ರತಿ ಸವಾಲು ಹಾಕಿದರು.

ಇನ್ನು ಸಾಲ ಮನ್ನಾ ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಒಂದು ಒಳ್ಳೆ ಮಾತಾಡಿಲ್ಲ ಎಂದು ಬಿಜೆಪಿಗೆ ಸಿಎಂ ಕುಮಾರಸ್ವಾಮಿ ಟಾಂಗ್ ಕೊಟ್ಟರು. 

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿವಾದಿತ ಪಾರ್ಕ್ ತಿದ್ದುಪಡಿ ವಿಧೇಯಕವನ್ನು ಕೊನೆಗೂ ಹಿಂಪಡೆದ ರಾಜ್ಯ ಸರ್ಕಾರ

ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್‌ ದಾಖಲಿಸಿ ಬೆದರಿಸುವ ಯತ್ನ, ಇದಕ್ಕೆ ಭಯ ಪಡಲ್ಲ ಎಂದ ಮಲ್ಲಿಕಾರ್ಜುನ ಖರ್ಗೆ ಕಿಡಿ

ರಾಹುಲ್ ಗಾಂಧಿಯನ್ನು ಏಕವಚನದಲ್ಲಿ ಕರೆದ್ರೆ, ನೀನು ಯಾವನೋ ಎಂದು ಕೇಳಬೇಕಾಗುತ್ತದೆ: ಶ್ರೀರಾಮುಲ್‌ಗೆ ಪ್ರದೀಪ್ ಈಶ್ವರ್‌ ವಾರ್ನಿಂಗ್

ಪಾಕ್‌ನ ವಿಮಾನ ಹೊಡೆದುರುಳಿಸಿ ಭಾರೀ ಸುದ್ದಿಯಾಗಿದ್ದ ಅಭಿನಂದನ್‌ ಅವಧಿಗೂ ಮುನ್ನಾ ನಿವೃತ್ತಿ, ಕಾರಣ ಏನ್ ಗೊತ್ತಾ

ಕೈದಿಯ ಜತೆ ಸರಸ ಸಲ್ಲಾಪದ ವಿಡಿಯೋ ಮಾಡಿ ಆತನಿಂದಲೇ ಹಣ ವಸೂಲಿ, ಪಿಎಸ್ಐ ಜಯಶ್ರೀಗೆ ಬಿಗ್‌ಶಾಕ್‌

ಮುಂದಿನ ಸುದ್ದಿ
Show comments