Publish Date: Mon, 09 Jul 2018 (09:38 IST)
Updated Date: Mon, 09 Jul 2018 (09:39 IST)
ಬೆಂಗಳೂರು: ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಒಟ್ಟು 14 ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿತ್ತು. ಕರ್ನಾಟಕದಲ್ಲಿ ರಾಜ್ಯ ಸರ್ಕಾರ ರೈತರ ಸಾಲಮನ್ನಾ ಮಾಡಿತ್ತು. ಆದರೆ ಮಾವು ಬೆಳೆಗಾರರಿಗೆ ಯಾವುದೇ ಬೆಂಬಲ ಬೆಲೆ ಘೋಷಣೆಯಾಗಿಲ್ಲ.
ಹೀಗಾಗಿ ರೊಚ್ಚಿಗೆದ್ದಿರುವ ಮಾವು ಬೆಳೆಗಾರರು ಭಾರೀ ಪ್ರತಿಭಟನೆ ನಡೆಸುತ್ತಿದ್ದು, ಶ್ರೀನಿವಾಸಪುರದಲ್ಲಿ ಬಂದ್ ಗೆ ಕರೆ ನೀಡಲಾಗಿದೆ. ರೈತರ ಪ್ರತಿಭಟನೆ ಇಲ್ಲಿ ಹಿಂಸಾರೂಪ ತಾಳಿದ್ದು, ಬಸ್ ಟೈರ್ ಗಳಿಗೆ ಬೆಂಕಿ ಹಚ್ಚಿರುವುದಲ್ಲದೆ, ಮಾವಿನ ಹಾರ, ಮಾವು ರಸ್ತೆಯಲ್ಲೇ ಸುರಿದು ಭಾರೀ ಪ್ರತಿಭಟನೆ ಮಾಡುತ್ತಿದ್ದಾರೆ.
ಹೀಗಾಗಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದಾರೆ. ಮಾವು ಬೆಳೆಗೆ ಪ್ರತೀ ಟನ್ ಗೆ 2 ಸಾವಿರ ರೂ. ಬೆಂಬಲ ಬೆಲೆ ನೀಡುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ, ಮಾವು ಖರೀದಿ ಮಾಡುವ ಆಂಧ್ರ, ಮಹಾರಾಷ್ಟ್ರ ಸಿಎಂಗಳ ಜತೆಯೂ ಸಿಎಂ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
Krishnaveni K
Publish Date: Mon, 09 Jul 2018 (09:38 IST)
Updated Date: Mon, 09 Jul 2018 (09:39 IST)