ಬೆಂಗಳೂರು: ಬಜೆಟ್ ಮೇಲಿನ ಪ್ರಶ್ನೋತ್ತರ ಕಲಾಪ ವಿಧಾನಸಭೆಯಲ್ಲಿ ಆರಂಭಗೊಂಡಿದ್ದು, ಸಿಎಂ ಎಚ್ ಡಿ ಕುಮಾರಸ್ವಾಮಿ ವಿಪಕ್ಷ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಿಎಂ ಕುಮಾರಸ್ವಾಮಿ ತಮ್ಮ ಮೇಲಿನ ತಾರತಮ್ಯ ಆರೋಪಕ್ಕೆ ತಿರುಗೇಟು ನೀಡಿದ್ದು ನಾನು ಯಾವುದೇ ಜಾತಿ, ಭಾಗಕ್ಕೆ ಮಾತ್ರ ಮುಖ್ಯಮಂತ್ರಿಯಾಗಿಲ್ಲ ಎಂದಿದ್ದಾರೆ. ಸಿಎಂ ಹೀಗೆ ಹೇಳುತ್ತಿದ್ದಂತೇ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
‘ನಾನು ಯಾವುದೋ ಒಂದು ಭಾಗಕ್ಕೆ ಮುಖ್ಯಮಂತ್ರಿಯಾಗಿಲ್ಲ. ಹಾಸನಕ್ಕೆ ರಿಂಗ್ ರೋಡ್ ನಿರ್ಮಿಸಲು 30 ಕೋಟಿ ರೂ. ಕೊಟ್ಟಿದ್ದೇನೆಂದರೆ ಆಕ್ಷೇಪ ವ್ಯಕ್ತಪಡಿಸುತ್ತೀರಿ. ಹಾಸನದಲ್ಲಿ ನಾನಾ ಶಾಸಕ? ಬಿಜೆಪಿಯವರು ಶಾಸಕರು. ನಿಮಗೆ ಬೇಡ್ವಾ? ಬೇಡಾಂದ್ರೆ ಕೊಡಿ, ಅದನ್ನೇ ಉತ್ತರ ಕರ್ನಾಟಕಕ್ಕೆ ಕೊಡ್ತೀನಿ. ಯಾವ ಭಾಗಕ್ಕೆ ಯಾವ ಸರ್ಕಾರದ ಅವಧಿಯಲ್ಲಿ ಎಷ್ಟೆಷ್ಟು ಖರ್ಚು ಮಾಡಲಾಗಿದೆ ಎನ್ನುವುದು ಈ ಸದನದಲ್ಲೇ ಚರ್ಚೆಯಾಗಲಿ’ ಎಂದು ಸಿಎಂ ಕುಮಾರಸ್ವಾಮಿ ಸವಾಲು ಹಾಕಿದರು. ಸಿಎಂ ಸವಾಲಿಗೆ ಪ್ರತಿಪಕ್ಷ ಬಿಜೆಪಿ ಸದಸ್ಯರು 50 ವರ್ಷಗಳ ಸಾಧನೆಗಳು ಚರ್ಚೆಯಾಗಲಿ ಎಂದು ಪ್ರತಿ ಸವಾಲು ಹಾಕಿದರು.
ಇನ್ನು ಸಾಲ ಮನ್ನಾ ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಒಂದು ಒಳ್ಳೆ ಮಾತಾಡಿಲ್ಲ ಎಂದು ಬಿಜೆಪಿಗೆ ಸಿಎಂ ಕುಮಾರಸ್ವಾಮಿ ಟಾಂಗ್ ಕೊಟ್ಟರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.