ಬೆಂಗಳೂರು : ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ವಿಚಾರಣೆಗೆ ಜು.19ರಂದು ಹಾಜರಾಗುವುದಾಗಿ ಮನವಿ ಸಲ್ಲಿಸಿದ್ದರೂ ಕೂಡ ರೋಷನ್ ಬೇಗ್ ಅವರನ್ನು ಎಸ್ ಐ ಟಿ ಅಧಿಕಾರಿಗಳ ತಂಡ ವಶಕ್ಕೆ ಪಡೆದುಕೊಂಡಿರುವ ಹಿನ್ನಲೆ ಬಿಜೆಪಿ ಶಾಸಕ ರೇಣುಕಾಚಾರ್ಯ ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂ ಅಧಿಕಾರ ಉಳಿಸಿಕೊಳ್ಳಲು ಶಾಸಕರನ್ನ ಬಂಧಿಸ್ತಿದ್ದಾರೆ. ಸಿಎಂ ಕುಮಾರಸ್ವಾಮಿಯವರೇ ಇದು ವಾಮಮಾರ್ಗ. ನೀವು ತನಿಖೆ ಮಾಡಿಸಿ, ಅದನ್ನು ನಾವು ಬೇಡ ಅನ್ನಲ್ಲ. ಆದ್ರೆ ಎಸ್ ಐಟಿಯನ್ನು ಅಸ್ತ್ರವಾಗಿ ಮಾಡಿಕೊಳ್ಳಬೇಡಿ ಎಂದು ಸಿಎಂ ಗೆ ಶಾಸಕ ರೇಣುಕಾಚಾರ್ಯ ಮನವಿ ಮಾಡಿಕೊಂಡಿದ್ದಾರೆ.
ಬಹುಮತ ಸಾಬೀತಿಗಾಗಿ ಸಿಎಂ ಕುಮಾರಸ್ವಾಮಿ ಶಾಸಕರನ್ನ ಹಿಡಿದಿಟ್ಟುಕೊಳ್ತಿದ್ದಾರೆ. ಸಿಎಂ ಕುಮಾರಸ್ವಾಮಿ ಒಂದು ರೀತಿ ಕ್ರಿಮಿನಲ್ ಆಗಿದ್ದಾರೆ ಎಂದು ಶಾಸಕ ರೇಣುಕಾಚಾರ್ಯ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.