Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗಂಟಲಿನಲ್ಲಿ ಸಿಲುಕಿಕೊಂಡ ಮೀನಿನ ಮುಳ್ಳು ಹೋಗಲು ಇದನ್ನ ತಿನ್ನಿ

ಗಂಟಲಿನಲ್ಲಿ ಸಿಲುಕಿಕೊಂಡ ಮೀನಿನ ಮುಳ್ಳು ಹೋಗಲು ಇದನ್ನ ತಿನ್ನಿ
ಬೆಂಗಳೂರು , ಮಂಗಳವಾರ, 16 ಜುಲೈ 2019 (09:36 IST)
ಬೆಂಗಳೂರು : ಮೀನು ಮಾಂಸಹಾರಿಗಳ ಪ್ರಿಯವಾದ ಭೋಜನ. ಆದರೆ ಇದನ್ನು ತಿನ್ನುವಾಗ ತುಂಬಾ ಹುಷಾರಾಗಿ ತಿನ್ನಬೇಕಾಗುತ್ತದೆ. ಇಲ್ಲವಾದರೆ ಅದರಲ್ಲಿರುವ ಮುಳ್ಳು ಗಂಟಲಿಗೆ ಸಿಲುಕಿಕೊಂಡರೆ ತುಂಬಾ ಅಪಾಯ. ಒಂದು ವೇಳೆ ಮೀನಿನ ಮುಳ್ಳು ಗಂಟಲಿಗೆ ಸಿಲುಕಿಕೊಂಡಾಗ ಅದು ಹೋಗಲು ಹೀಗೆ ಮಾಡಿ.






*ಗಂಟಲಿನಲ್ಲಿ ಮುಳ್ಳು ಸಿಲುಕಿಕೊಂಡಿದ್ದರೆ ಬಾಳೆಹಣ್ಣು ಸೇವಿಸುವುದು ಒಳ್ಳೆಯ ವಿಧಾನ. ಬಾಳೆಹಣ್ಣನ್ನು ಸ್ವಲ್ಪನೇ ಜಗಿದು ಹಾಗೆ ನುಂಗಿ. ಬಾಯಿಯಲ್ಲಿ ಎರಡು ನಿಮಿಷ ಇಟ್ಟುಕೊಂಡು ಬಳಿಕ ಬಾಳೆಹಣ್ಣನ್ನು ನುಂಗಿ. ನೀರು ಕುಡಿಯಿರಿ. ಇದರಿಂದ ಸಿಲುಕಿಕೊಂಡ ಮುಳ್ಳು ಜಾರಿಕೊಂಡು ಹೋಗುತ್ತದೆ.


*ಎರಡು ಚಮಚ ಕಡಲೆ ಬೀಜಗಳನ್ನು ಬಾಯಿಗೆ ಹಾಕಿಕೊಂಡು ಜಗಿಯಿರಿ. ಬಳಿಕ ನುಂಗಿ. ಇದು ಗಂಟಲಿನ ಮುಳ್ಳನ್ನು ತೆಗೆದು ಹಾಕುವುದು.


* ಒಂದು ಹಿಡಿಯಷ್ಟು ಬೇಯಿಸಿದ ಅನ್ನವನ್ನು ಉಂಡೆ ಮಾಡಿಕೊಂಡು  ಜಗಿಯದೆ ಹಾಗೆ ನುಂಗಿದ ಬಳಿಕ ನೀರು ಕುಡಿಯಿರಿ.
ಆದರೆ ಈ ಯಾವ ಮನೆಮದ್ದು ಫಲಿಸದಿದ್ದಾಗ ತಕ್ಷಣ ವೈದ್ಯರನ್ನು ಭೇಟಿಯಾಗುವುದು ಉತ್ತಮ ಇಲ್ಲವಾದರೆ ಅದರಿಂದ ಸೋಂಕು ಬರಬಹುದು.


Share this Story:

Follow Webdunia kannada

ಮುಂದಿನ ಸುದ್ದಿ

ತುಟಿಯ ಮೇಲೆ ಮೂಡಿರುವ ನೀರಿನ ಗುಳ್ಳೇಗಳ ನಿವಾರಣೆಗೆ ಈ ಮನೆಮದ್ದನ್ನು ಬಳಸಿ