ಬಜರಂಗದಳ ವಿಚಾರದಲ್ಲಿ KPCC ಅಧ್ಯಕ್ಷ D.K. ಶಿವಕುಮಾರ್ ಎತ್ತಿದ ಪ್ರಶ್ನೆಗೆ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಬಜರಂಗದಳಕ್ಕೂ ಆಂಜನೇಯನಿಗೂ ಏನು ಸಂಬಂಧ ಅಂತ ಡಿಕೆಶಿ ಪ್ರಶ್ನಿಸ್ತಾರೆ.. ರಾಮನಿಗೂ ಹನುಮನಿಗೂ ಏನು ಸಂಬಂಧ ಇದೆಯೋ ಅದೇ ಸಂಬಂಧ ಆಂಜನೇಯನಿಗೂ ಬಜರಂಗದಳಕ್ಕಿದೆ ಎಂದು ತಿರುಗೇಟು ನೀಡಿದ್ರು. ಜನರ ಭಾವನೆಗಳಿಗೆ ಧಕ್ಕೆ ಬರೋ ರೀತಿಯಲ್ಲಿ ಮಾತನಾಡೋದು ಸರಿಯಲ್ಲ.. ನಾವು ನಮ್ಮ ಕಾರ್ಯಕ್ರಮಗಳ ಆಧಾರದಲ್ಲಿ ಚುನಾವಣೆ ಎದುರಿಸ್ತಿದ್ದೇವೆ.. ಅವ್ರು ಅವರ ಭರವಸೆಗಳ ಮೇಲೆ ಚುನಾವಣೆ ಎದುರಿಸುತ್ತಿದ್ದಾರೆ.. ಅನವಶ್ಯಕವಾಗಿ ಕೆದಕಿ-ಕೆದಕಿ ಚುನಾವಣೆ ಸಂದರ್ಭದಲ್ಲಿ ಜಾತಿ-ಧರ್ಮ, ಕೋಮು ಭಾವನೆ ಕೆರಳಿಸೋದು ಸರಿಯಲ್ಲ ಎಂದು ಆಕ್ರೋಶ ಹೊರ ಹಾಕಿದ್ರು.. ಕಾಂಗ್ರೆಸ್ ಪಕ್ಷ ಇಂದು SDPI ಮತ್ತು PFI ಕಪಿಮುಷ್ಟಿಯಲ್ಲಿದೆ.. ಅದರಿಂದ ಹೊರಬರಲು ಸಾಧ್ಯವಿಲ್ಲ.. ಅವರು ಒತ್ತಡಕ್ಕೆ ಮಣಿಯುತ್ತಿದ್ದಾರೆ ಎಂದು ಆರೋಪಿಸಿದ್ರು. ನಾವು SDPI, PFIಯನ್ನು ವಿರೋಧ ಮಾಡ್ತೇವೆ.. ಇದ್ರಿಂದ ಕಾಂಗ್ರೆಸ್ ನಾಯಕರು ತಳಮಳಗೊಂಡು ಈ ರೀತಿ ಹೇಳಿಕೆ ಕೊಡ್ತಿದ್ದಾರೆ.. ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡ್ತಿದೆ ಎಂದು ಸಿಎಂ ಬೊಮ್ಮಾಯಿ ಕಿಡಿಕಾರಿದ್ದಾರೆ.