Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಾನು ದಾನ ಕೊಟ್ಟಿದ್ದೇನಷ್ಟೇ ಹೊರತು, ತಗೊಂಡಿಲ್ಲ: ವಕ್ಫ್ ಆಸ್ತಿ ಕಬಳಿಕೆ ಆರೋಪಕ್ಕೆ ಸಿಎಂ ಇಬ್ರಾಹಿಂ ಪ್ರತಿಕ್ರಿಯೆ

CM Ibrahim

Krishnaveni K

ಬೆಂಗಳೂರು , ಶುಕ್ರವಾರ, 8 ನವೆಂಬರ್ 2024 (13:06 IST)
Photo Credit: Facebook
ಬೆಂಗಳೂರು: ವಕ್ಫ್ ಆಸ್ತಿ ಕಬಳಿಕೆ ಮಾಡಿದ್ದಾರೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಕ್ಕೆ ಸಿಎಂ ಇಬ್ರಾಹಿಂ ಪ್ರತಿಕ್ರಿಯಿಸಿದ್ದಾರೆ. ನಾನು ದಾನ ಕೊಟ್ಟಿದ್ದಷ್ಟೇ ಹೊರತು, ತಗೊಂಡಿಲ್ಲ ಎಂದಿದ್ದಾರೆ.

ಯತ್ನಾಳ್ ಹೇಳ್ತಾರೆ ನಾನು ವಕ್ಫ್ ಭೂಮಿ ಕಬಳಿಕೆ ಮಾಡಿದ್ದೇನಂತೆ. ನಾನು ಎಲ್ಲಿ ತಗೊಂಡಿದ್ದೇನೆ ಎಂದು ದಾಖಲೆ ಕೊಡು ಇಲ್ಲಾ ಕ್ಷಮೆ ಕೇಳು, ಕೋರ್ಟ್ ಗೆ ಬಂದು ವಿಚಾರಣೆ ಎದುರಿಸು ಎಂದು ಯತ್ನಾಳ್ ಗೆ ಸವಾಲು ಹಾಕಿದ್ದಾರೆ. ಯತ್ನಾಳ್ ಮೇಲೆ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ ಎಂದೂ ಅವರು ಹೇಳಿದ್ದಾರೆ.

ಬಿಜಾಪುರದಲ್ಲಿ ಪ್ರತಿಭಟನೆ ನಡೆದರು. ಅವರಲ್ಲಿ ಯಾರೂ ರೈತರಲ್ಲ. ಎಲ್ಲಾ ಇವರೇನೇ. ಜೆಪಿಸಿ ಅಧ್ಯಕ್ಷರನ್ನೂ ಕರೆತಂದರು. ಅಯ್ಯೋ ಇವರ ಕತೆಯೇ? ಭೂ ಸುಧಾರಣೆ ಕಾಯಿದೆ ಬಂದ ಮೇಲೆ ದೇವಸ್ಥಾನಗಳ ಜಮೀನು ಹೋಯ್ತು ಅದರ ಬಗ್ಗೆ ಏನಾರ ಮಾತಾಡಿದ್ದೀರಾ? ಎಷ್ಟೋ ಮಠಗಳು ವಿದ್ಯಾದಾನ ಮಾಡುವಂತಹ ಸಂಸ್ಥೆಗಳ ಜಮೀನು ಹೋಯ್ತು ಅವುಗಳ ಬಗ್ಗೆ ಮಾತನಾಡಿದ್ದೀರಾ ಇಲ್ಲ’ ಎಂದು ಯತ್ನಾಳ್ ಗೆ ಪ್ರಶ್ನೆ ಮಾಡಿದ್ದಾರೆ.

ಯತ್ನಾಳ್ ಈಗ ಕೇವಲ ರಾಜಕೀಯಕ್ಕಾಗಿ ವಿಷಯವೇ ಇಲ್ಲದ ವಿಷಯ ಇಟ್ಟುಕೊಂಡು ರಾಷ್ಟ್ರವ್ಯಾಪಿ ಹೋರಾಟ ಮಾಡುತ್ತೇವೆ ಎಂದು ವಕ್ಫ್ ವಿಚಾರದಲ್ಲಿ ಹೋರಾಟ ಮಾಡಲು ಹೊರಟಿದ್ದಾರೆ ಎಂದು ಸಿಎಂ ಇಬ್ರಾಹಿಂ ಆರೋಪ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಾಲ್ಮೀಕಿ ನಿಗಮ ಹಗರಣದಲ್ಲಿ ಇ ತುಕರಾಂ, ವಕ್ಫ್ ಆಸ್ತಿ ಕಬಳಿಕೆಯಲ್ಲಿ ಕಾಂಗ್ರೆಸ್ ನಾಯಕರೇ ಭಾಗೀದಾರ: ಪ್ರಲ್ಹಾದ್ ಜೋಶಿ