Publish Date: Sat, 23 Oct 2021 (11:37 IST)
Updated Date: Sat, 23 Oct 2021 (11:43 IST)
ವಿಜಯಪುರ : ಕಣ್ಣ ಮುಂದೆಯೇ ಯುವಕನನ್ನು ಕೊಲೆ ಮಾಡಲಾಯ್ತು ಎಂದು ಯುವತಿಯೇ ಪೊಲೀಸರಿಗೆ ಫೋನ್ ಮಾಡಿ ವಿಷಯ ತಿಳಿಸಿರುವ ಘಟನೆ ವಿಜಯಪುರ ಜಿಲ್ಲೆಯ ಆಲಮೇಲ ಪೊಲೀಸ್ ಠಾಣೆಯಲ್ಲಿ ನಡೆದಿದೆ.
32 ವರ್ಷದ ರವಿ ನಂಬರಗಿ ಕೊಲೆ ಆಗಿದ್ದಾನೆ ಎಂದು ಹೇಳಲಾಗುತ್ತಿದೆ. ಆದ್ರೆ ರವಿ ನಂಬರಗಿ ಶವ ಪತ್ತೆಯಾಗಿಲ್ಲ ಎಂದು ಹೇಳಲಾಗುತ್ತಿದೆ. ಯುವತಿಯೇ ತಮ್ಮ ಕುಟುಂಬದ ಎಂಟು ಜನರನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾಳೆ. ಶುಕ್ರವಾರ ಸಂಜೆಯೇ ಘಟನೆ ನಡೆದಿದ್ದರೂ ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ. ರವಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಯುವತಿ ಮತ್ತು ಆಕೆಯ ಕುಟುಂಬಸ್ಥರು ಗ್ರಾಮದಿಂದ ಪರಾರಿಯಾಗಿದ್ದಾರೆ