Publish Date: Sun, 26 Feb 2023 (15:09 IST)
Updated Date: Sun, 26 Feb 2023 (15:14 IST)
ಕಾಂಗ್ರೇಸ್ ಬಿಜೆಪಿ ಕಾರ್ಯಕರ್ತರ ನಡುವೆ ಬಸವನಗುಡಿಯ ಗಿರಿನಗರ ವಾರ್ಡ್ ನಲ್ಲಿ ಮಾತಿನ ಜಟಾಪಟಿ, ತಳ್ಳಾತ ನೂಕಾಟ ನಡೆದಿದೆ.ರಸ್ತೆ ದುರಸ್ಥಿ ವಿಚಾರಕ್ಕೆ ರಸ್ತೆಯಲ್ಲೇ ಜಟಾಪಟಿ ನಡೆದಿದ್ದು,40% ಸರ್ಕಾರ ಕಳಪೆ ಕಾಮಗಾರಿ ಅಂತ ಕಾಂಗ್ರೆಸ್ ಕಾರ್ಯಕರ್ತರ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ಚುನಾವಣೆ ಗಿಮಿಕ್, ಪ್ರಚಾರಕ್ಕಾಗಿ ಈ ಪ್ರತಿಭಟನೆ ಎಂದು ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ.ಗಿರಿನಗರ ವಾರ್ಡ್ ನಲ್ಲಿ BWSSB ಕಾಮಗಾರಿಗೆ ರಸ್ತೆ ಅಗೆಯಲಾಗಿದೆ.ಕಾಮಗಾರಿ ಮುಗಿದು ಎರಡು ತಿಂಗಳು ಕಳೆದರು ಡಾಂಬರೀಕರಣ ಮಾಡಿಲ್ಲ.ಇದ್ರಿಂದ ನಿವಾಸಿಗಳಿಗೆ ಧೂಳಿನಿಂದ ಸಾಕಷ್ಟು ಸಮಸ್ಯೆ ಆಗ್ತಾ ಇತ್ತು.ವಾಹನಗಳ ಸಂಚಾರಕ್ಕೂ ಸಮಸ್ಯೆ ಆಗ್ತಾ ಇತ್ತು..ಈ ಹಿನ್ನೆಲೆ ಇಂದು ಕಾಂಗ್ರೆಸ್ ಮುಖಂಡ ಡಾ. ಶಂಕರ್ ಗುಹಾ, ನಿವಾಸಿಗಳ ನೇತೃತ್ವದಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆ ನಡೆಸಿದ್ರು.
ರಸ್ತೆಗೆ ಟ್ಯಾಂಕರ್ ಮೂಲಕ ನೀರು ತರಿಸಿ ಬಿಂದಿಗೆ ಮೂಲಕ ರಸ್ತೆಗೆ ನೀರು ಹಾಕುವ ಮೂಲಕ ಪ್ರತಿಭಟನೆ ಮಾಡಿದ್ರು.ಈ ವೇಳೆ ಸ್ಥಳಕ್ಕೆ ಬಿಜೆಪಿ ಕಾರ್ಯಕರ್ತರು ಬಂದು ವಿರೋಧ ವ್ಯಕ್ತಪಡಿಸಿದ್ರು.ಆಗ ಎರಡು ಪಕ್ಷದ ಕಾರ್ಯಕರ್ತರ ನಡುವೆ ಹೈಡ್ರಾಮಾ ನಡೆದಿದೆ.