Publish Date: Wed, 10 May 2023 (16:40 IST)
Updated Date: Wed, 10 May 2023 (16:21 IST)
ಬಿಜೆಪಿ ಕಾರ್ಯಕರ್ತರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಶಾಂತಿನಗರದಲ್ಲಿ ಗಲಾಟೆ ನಡೆದಿದೆ.ಶಾಂತಿ ನಗರ ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಕಾರ್ಯಕರ್ತರು ಹಣ ಹಂಚಿರುವ ಆರೋಪ ಕೇಳಿಬಂದಿದ್ದು,ಹಣ ಹಂಚಿರುವ ಹಿನ್ನಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಆಕ್ರೋಶ ಹೊರಹಾಕಿದ್ದಾರೆ.
ಅಲ್ಲದೇ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಬಿಟಿಎಂ ಲೇಔಟ್ ವಿಧಾನಸಭೆಯ ಲಕ್ಕಸಂದ್ರ ವಾರ್ಡ್ ನಲ್ಲಿಯೂ ಗಲಾಟೆ ನಡೆದಿದೆ.ಮತದಾನದ ಚೀಟಿ ಬರೆದುಕೊಡುವ ವಿಚಾರವಾಗಿ ಗಲಾಟೆ ನಡೆದಿದೆ.ಬಿಜೆಪಿ ಕಾರ್ಯಕರ್ತ ರಾಜಾ ಎಂಬುವರ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದ್ದು,ಕಾಂಗ್ರೆಸ್ ಕಾರ್ಯಕರ್ತರಾದ ಮಂಜು@ ಗಾರ್ಬೇಜ್ ಅಂಡ್ ಗ್ಯಾಂಗ್ ನಿಂದ ಹಲ್ಲೆ ಆರೋಪ ಕೇಳಿಬಂದಿದೆ.ಘಟನೆ ಸಂಬಂದ ಅಡುಗೊಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.