Publish Date: Tue, 19 Mar 2019 (14:14 IST)
Updated Date: Tue, 19 Mar 2019 (14:16 IST)
ಸುಳ್ಳಿನ ಸರದಾರ ಯಾರಾದರೂ ಪ್ರಧಾನಿಯಾಗಿದ್ರೆ ಅದು ನರೇಂದ್ರ ಮೋದಿ. ಜೂಟ್ ಕಾ ರಾಜಾ, ಜೂಟ್ ಕಾ ಸರ್ದಾರ್ ಏ ನರೇಂದ್ರ ಮೋದಿ ಕಾಂಗ್ರೆಸ್ ವಾಲೋ ಕೀ ಬಾತ್ ಕರತಾ ಹೈ. ಹೀಗಂತ ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಒಂದೆಡೆ ಸುಳ್ಳಿನ ಸರದಾರ ಮೋದಿ ಇದ್ದಾರೆ, ಮತ್ತೊಂದೆಡೆ ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆ ಇದ್ದಾರೆ. ಕಲಬುರಗಿಗೆ ಆಗಮಿಸಿದ ಸುಳ್ಳಿನ ಸರದಾರ ಮೋದಿ, ದೇಶದಲ್ಲಿ ಭ್ರಷ್ಟಾಚಾರ, ಮಹಿಳೆಯರ ಮೇಲೆ ಅತ್ಯಾಚಾರ ಆಗುತ್ತಿದ್ದರೂ ಕ್ರಮ ಕೈಗೊಂಡಿಲ್ಲ. ನವದೆಹಲಿಯಲ್ಲಿ ದಿನಕ್ಕೆ ಆರು ಮಹಿಳೆಯರ ಮೇಲೆ ಅತ್ಯಾಚಾರ ನಡೀತಿದೆ. ಇಲ್ಲಿ ಬಂದು ಹಮ್ ಸಬ್ ಚೋರೋ ಕಾ ದುಖಾನ್ ಬಂದ್ ಕರ್ ದೇತಾ ಹುಂ ಎಂದ್ರು. ಆದರೆ ಕಳ್ಳನ ಕೈಯಲ್ಲಿ ಬೀಗದ ಕೈ ಕೊಟ್ಟ ಹಾಗಾಗಿದೆ ಎಂದು ವ್ಯಂಗ್ಯವಾಡಿದ್ರು.
ಜಬ್ ಚೌಕೀದಾರ್ ಚೋರ್ ಹೋತಾ ಹೈ ತೋ ಕ್ಯಾ ಹೋತಾ ಹೈ? ಎಂದ ಅವರು, ಈಗ ಚೌಕೀದಾರ್ ಚೋರ್ ಹೈ ಹೊಸ ಸ್ಲೋಗನ್ ಆಗಿದೆ ಎಂದರು.
ಐದು ವರ್ಷಗಳಲ್ಲಿ ಮೋದಿ ಒಂದೇ ಒಂದು ಸುದ್ದಿಗೋಷ್ಠಿ ನಡೆಸಿಲ್ಲ. ಗಾಂಧಿ ಸಿದ್ಧಾಂತ ಬೇಕಾದ್ರೆ ಮಲ್ಲಿಕಾರ್ಜುನ ಖರ್ಗೆರವರಿಗೆ ಮತಹಾಕಿ. ಭಾರತ ದೇಶದ ಮೊದಲ ಉಗ್ರ ಗೋಡ್ಸೆ ಸಿದ್ಧಾಂತ ಬೇಕಾದ್ರೆ ಮೋದಿಗೆ ಮತಹಾಕಿ ಆಯ್ಕೆ ನಿಮ್ದು ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಿ.ಕೆ.ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ರು.