Publish Date: Tue, 19 Mar 2019 (06:28 IST)
Updated Date: Tue, 19 Mar 2019 (06:31 IST)
ಕಲಬುರಗಿ : ಬಸವಕಲ್ಯಾಣ ಕೈ ಶಾಸಕ ಬಿ ನಾರಾಯಣ್ ರಾವ್ ಅವರು ಪ್ರಧಾನಿ ಮೋದಿಯನ್ನು ಷಂಡರಿಗೆ ಹೋಲಿಸಿ ವ್ಯಂಗ್ಯವಾಡಿದ್ದಾರೆ.
ಕೈ ಪರಿವರ್ತನಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರ ಹಿಂದೆ ಇಡೀ ದೇಶವಿದೆ. ಆದರೆ ಅದು ಮೋದಿಗೆ ಅರ್ಥವಾಗುತ್ತಿಲ್ಲ. ನಾಮರ್ಧ್ ಕೇ ಸಾಥ್ ಶಾದಿ ಹೋ ಸಕ್ತಿ ಹೈ, ಮಗರ್ ಔಲಾದ್ ನಹೀ ಹೋತಿ ಹೈ (ಷಂಡರ ಜೊತೆ ಮದ್ವೆಯಾಗುತ್ತದೆ. ಆದರೆ ಮಕ್ಕಳಾಗಲ್ಲ). ಮೋದಿ ಸೇ ಶಾದಿ ಹೋ ಸಕ್ತಿ ಹೈ, ಮಗರ್ ಔಲಾದ್ ನಹೀ ಹೋತೆ ಹೈ(ಮೋದಿ ಜೊತೆ ಮದ್ವೆಯಾಗಬಹುದು, ಆದರೆ ಮೋದಿಗೆ ಮಕ್ಕಳಾಗಲ್ಲ) ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆಯನ್ನು ಎದುರಿಸೋ ಶಕ್ತಿ ಮೋದಿಗಿಲ್ಲ. ಮಲ್ಲಿಕಾರ್ಜುನ ಖರ್ಗೆ ಮುಂದೊಂದು ದಿನ ದೇಶದ ಪ್ರಧಾನಿಯಾಗಲಿದ್ದಾರೆ ಎನ್ನುತ್ತ ಹಿಂದಿಯ ಶಾಯರಿಯೊಂದನ್ನು ಬಳಸಿ ಮೋದಿ ಅವರಿಗೆ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.