Publish Date: Mon, 12 Nov 2018 (14:57 IST)
Updated Date: Mon, 12 Nov 2018 (14:59 IST)
ಕೇಂದ್ರ ಸಚಿವ ಅನಂತಕುಮಾರ್ ಅವರು ಸಜ್ಜನ, ಸವ್ಯಸಾಚಿ, ಸ್ನೇಹಮಯಿಯಾಗಿದ್ದರು. ಜೀವಪರವಾದ ಕಾಳಜಿಗೆ ಹೆಸರಾಗಿದ್ದರು ಎಂದು ಅವರ ನಿಧನಕ್ಕೆ ಚಿತ್ರದುರ್ಗ ಶ್ರೀಗಳು ಸಂತಾಪ ಸೂಚಿಸಿದ್ದಾರೆ.
ಕೇಂದ್ರ ಸಚಿವ ಅನಂತಕುಮಾರ್ ರ ನಿಧನದ ಸುದ್ದಿ ರಾಜ್ಯ , ರಾಷ್ಟ್ರಕ್ಕೆ ತೀವ್ರ ವೇದನೆ ತಂದಿದೆ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಸಂತಾಪ ವ್ಯಕ್ತಪಡಿಸಿದ್ದಾರೆ.
ಮುತ್ಸದ್ದಿ ರಾಜಕಾರಣಿಯನ್ನು ಕಳೆದುಕೊಂಡಿದ್ದೇವೆ. ಅನಂತಕುಮಾರ್ ಗೆ ಅಂತಿಮ ನಮನ ಸಲ್ಲಿಸುವ ಸಂದರ್ಭವಿದು. ಅನಂತಕುಮಾರ್ ಪ್ರಬುದ್ಧ ರಾಜಕಾರಣಿಯಾಗಿದ್ದರು. ಸವಾಲುಗಳನ್ನು ಸ್ವೀಕರಿಸಿ ಪ್ರಬುದ್ಧವಾಗಿ ನಿರ್ವಹಿಸಿದ್ದಾರೆ. ಅವರ
ಕುಟುಂಬಕ್ಕೆ ಅಗಲಿಕೆಯ ದುಃಖ ಸಹಿಸಿಕೊಳ್ಳುವ ಶಕ್ತಿ ಸಿಗಲಿ ಎಂದು ಶ್ರೀಗಳು ತಿಳಿಸಿದ್ದಾರೆ.