Publish Date: Mon, 12 Nov 2018 (14:50 IST)
Updated Date: Mon, 12 Nov 2018 (14:54 IST)
ಕೇಂದ್ರ ಸಚಿವ ಅನಂತಕುಮಾರ್ ನಿಧನದ ಹಿನ್ನೆಲೆ ಕಲಬುರಗಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಲಬುರಗಿ ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಶ್ರದ್ಧಾಂಜಲಿಯನ್ನು ಕಲಬುರಗಿ ದಕ್ಷಿಣ ಬಿಜೆಪಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ನೇತೃತ್ವದಲ್ಲಿ ಸಲ್ಲಿಸಲಾಯಿತು.
ಅನಂತಕುಮಾರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಕೆ ಮಾಡಲಾಯಿತು. ಅನಂತಕುಮಾರ್ 6 ಬಾರಿ ಸಂಸತ್ ಸದಸ್ಯರಾಗಿ, ಕೇಂದ್ರದ ಸಚಿವರಾಗಿ ಸೇವೆ ಸಲ್ಲಿಸಿದವರು. ಅನಂತಕುಮಾರ್ ಅಗಲಿಕೆ ಇಡೀ ದೇಶಕ್ಕೆ ತುಂಬಲಾರದಂತಹ ನಷ್ಟವಾಗಿದೆ ಎಂದು ಕಲಬುರಗಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಹೇಳಿದರು.
ವೈಯಕ್ತಿಕವಾಗಿ ಕಲಬುರಗಿ ಜಿಲ್ಲೆಯ ಮೇಲೆ ಹೆಚ್ಚಿನ ಪ್ರೀತಿ ಇಟ್ಟುಕೊಂಡಿದ್ದರು. ರಾಜಕೀಯವಾಗಿ, ಕಲಬುರಗಿ ಅಭಿವೃದ್ಧಿಗೆ ಎಂದೆಂದಿಗೂ ಸಹಕಾರ ನೀಡಿದಂತವರು. ಅನಂತಕುಮಾರ್ ನಮ್ಮ ಮಧ್ಯದಲ್ಲಿ ಇಲ್ಲವೆಂಬುದು ನಂಬಲಿಕ್ಕೆ ಆಗುತ್ತಿಲ್ಲ. ವೈಯಕ್ತಿಕವಾಗಿ ನನ್ನ ತಂದೆ ಹಾಗೂ ನನ್ನನ್ನು ರಾಜಕೀಯವಾಗಿ ಬೆಳೆಸಿದ್ದರು. ಅವರ ಅಗಲಿಕೆಯ ದುಃಖವನ್ನು ಭರಿಸುವಂತ ಶಕ್ತಿ ಕುಟುಂಬಕ್ಕೆ ಕೊಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುವುದಾಗಿ ತಿಳಿಸಿದರು.