Select Your Language

Notifications

webdunia
webdunia
webdunia
webdunia

ಮಳೆಯಿಂದಾಗಿ ರಾಮಮ್ಮನ ಕೆರೆ‌ ಕೋಡಿ ಬಿದ್ದು ಮನೆಗಳು ಜಲಾವೃತ

Rain emergency in Ramnagar
ರಾತ್ರಿ ಸುರಿದ ಮಳೆಯಿಂದಾಗಿ ರಾಮಮ್ಮನ ಕೆರೆ‌ ಕೋಡಿ ಬಿದ್ದು ಮನೆಗಳು ಜಲಾವೃತವಾಗಿರುವಂತಹ ಘಟನೆ ನಡೆದಿದೆ. ತಿಟ್ಟಮಾರನಹಳ್ಳಿ ಗ್ರಾಮದ ಬಳಿಯ ರಾಮಮ್ಮನ ಕೆರೆ‌ ಕೋಡಿ ಬಿದ್ದು 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಚನ್ನಪಟ್ಟಣ ತಾಲೂಕಿನ ಎಲೆಕೆರೆ ಗ್ರಾಮದಲ್ಲೂ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಮನೆಗೆ ನೀರು ನುಗ್ಗಿದ್ದರಿಂದ  ಕುಟುಂಬಸ್ಥರು ಪರದಾಡುವಂತ್ತಾಗಿದೆ. ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ದಳ ಸಿಬ್ಬಂದಿ ನೀರು ಹೊರ ಹಾಕಿದರು. ಮನೆಗಳಿಗೆ ಚರಂಡಿ ನೀರು ನುಗ್ಗಿ ಜನರು ಪರದಾಡಿರುವಂತಹ ಘಟನೆ ಬೀಡಿ ಕಾಲೋನಿ, ಆರ್​ಎಂಸಿ ಕಾಲೋನಿಯಲ್ಲಿಯೂ ನಡೆದಿದೆ. 20 ಹೆಚ್ಚು ಮನೆಗಳಿಗೆ ಚರಂಡಿ ನೀರು ನುಗ್ಗಿ ಅವಾಂತರ ಉಂಟಾಗಿದ್ದು, ಮನೆಗಳಿಗೆ ಚರಂಡಿ ನೀರು ನುಗ್ಗಿ ಕುಟುಂಬಸ್ಥರು ಪರದಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಈದ್ಗಾ ಮೈದಾನ ಕಂದಾಯ ಇಲಾಖೆಯ ಸ್ಥಳ