Publish Date: Sat, 18 Dec 2021 (09:11 IST)
Updated Date: Sat, 18 Dec 2021 (09:13 IST)
ಬೆಂಗಳೂರು : ಬಟ್ಟೆ ಬದಲಿಸುವ ನೆಪದಲ್ಲಿ ಸ್ನೇಹಿತೆಯ ಮನೆ ನುಗ್ಗಿ ಯುವತಿಯೊಬ್ಬಳು ಚಿನ್ನ ಮತ್ತು ಹಣವನ್ನು ಕದ್ದ ಘಟನೆ ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದಿದೆ.
ಅಜ್ರಾ ಸಿದ್ದಿಕ್(26) ಆರೋಪಿ. ಎರಡು ದಿನದ ಹಿಂದೆ ಆಕೆ ಗೆಳತಿ ಮನೆಗೆ ಬಂದಿದ್ದು, ಬಟ್ಟೆ ಬದಲಾಯಿಸುವ ನೆಪದಲ್ಲಿ ಚಿನ್ನಾಭರಣ ಮತ್ತು 11 ಲಕ್ಷ ನಗದು ಹಣವನ್ನು ದೋಚಿಕೊಂಡು ಪರಾರಿಯಾಗಿದ್ದಾಳೆ.
ಮಧ್ಯಾಹ್ನ 3.40ರ ವೇಳೆಗೆ ಮನೆಗೆ ಬಂದ ಅಜ್ರಾಳಿಗೆ ಗೆಳತಿ ರೂಮ್ನಲ್ಲಿದ್ದ ಕರ್ಬೋಡ್ಗೆ ಬೀಗ ಹಾಕದಿರುವುದು ಕಣ್ಣಿಗೆ ಬಿದ್ದಿರುತ್ತದೆ. ಬಳಿಕ ಆಕೆ ಪದೇ ಪದೇ ಬಟ್ಟೆ ಬದಲಾಯಿಸುವ ನೆಪದಲ್ಲಿ ಈ ಕೃತ್ಯ ಎಸಗಿದ್ದಾಳೆ.
ಇತ್ತ ರಾತ್ರಿ ಲಾಕರ್ ನೋಡಿದ ಸ್ನೇಹಿತೆಗೆ ಮನೆಯಲ್ಲಿ ಕಳ್ಳತನ ಆಗಿರುವುದು ಗೊತ್ತಾಗುತ್ತದೆ. ಬಳಿಕ ಪೊಲೀಸರಿಗೆ ದೂರು ನೀಡಿದಾಗ ಅಜ್ರಾ ಕಳ್ಳತನ ಮಾಡಿರುವುದಾಗಿ ತಿಳಿಯುತ್ತದೆ. ನಂತರ ಪೊಲೀಸರು ಆಕೆಯನ್ನು ಬಂಧಿಸುತ್ತಾರೆ.
ವಿಚಾರಣೆ ವೇಳೆ ಚಿನ್ನಾಭರಣ ಮತ್ತು ಹಣ ಎಲ್ಲಿದೆ ಎಂದು ಕೇಳಿದಾಗ ತನ್ನ ಮನೆ ಪಕ್ಕದ ನೀರಿನ ಟ್ಯಾಂಕಿಯಲ್ಲಿ ಕವರ್ನೊಳಗೆ ಮುಚ್ಚಿಟ್ಟಿರುವುದಾಗಿ ಹೇಳುತ್ತಾಳೆ. ಇದರ ಕುರಿತು ಪರಿಶೀಲನೆ ನಡೆಸಿದ ಪೊಲೀಸರು ಆರೋಪಿಯ ಕೈಯಿಂದ ಚಿನ್ನಾಭರಣವನ್ನು ವಶ ಪಡಿಸಿಕೊಂಡಿದ್ದಾರೆ.