Publish Date: Fri, 17 Dec 2021 (09:38 IST)
Updated Date: Fri, 17 Dec 2021 (09:42 IST)
ಚೆನ್ನೈ: 5 ನೇ ತರಗತಿಯಲ್ಲಿ ಓದುತ್ತಿದ್ದ ಸರ್ಕಾರಿ ಶಾಲೆ ವಿದ್ಯಾರ್ಥಿನಿಯೊಬ್ಬಳು ಶಾಲೆಯ ಅಡುಗೆ ಮನೆಯಲ್ಲಿ ಸುಟ್ಟು ಕರಕಲಾಗಿದ್ದ ಘಟನೆ ನಡೆದಿತ್ತು. ಈ ಹೃದಯ ವಿದ್ರಾವಕ ಘಟನೆ ಹಿಂದೆ ಬೇರೆಯದ್ದೇ ಕತೆಯಿದೆ ಎಂಬುದು ಸ್ಥಳೀಯರ ವಾದ.
ಊಟದ ವಿರಾಮದ ವೇಳೆ ಮನೆಗೆ ಹೋಗಬೇಕಿದ್ದ ಬಾಲಕಿ ಅಡುಗೆ ಮನೆಯಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಆಕೆ ಮನೆಗೆ ಬಾರದೇ ಇದ್ದಿದ್ದರಿಂದ ಗಾಬರಿಗೊಂಡ ಪೋಷಕರು ಶಾಲೆಗೆ ಹುಡುಕಿಕೊಂಡು ಬಂದಿದ್ದರು.
ಆಕೆಗೆ ಬೇಕೆಂದೇ ಯಾರಾದರೂ ಹೀಗೆ ಮಾಡಿದ್ದಾರಾ ಅಥವಾ ಅಕಸ್ಮತ್ತಾಗಿ ಈ ಘಟನೆ ನಡೆದಿದೆಯೇ ಎಂಬ ಅನುಮಾನ ಇದೀಗ ಮೂಡಿದೆ. ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿರಬಹುದು ಎಂಬುದು ಸ್ಥಳೀಯರ ಅನುಮಾನ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.