Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು : ಬೈ ಎಲೆಕ್ಷನ್ ಗೂ ಮುನ್ನ ಸಂಪುಟದಲ್ಲಿ ಬದಲಾವಣೆ ಮಾಡಲಾಗಿದ್ದು, ಸಚಿವರ ಖಾತೆಯಲ್ಲಿ ಬದಲಾವಣೆ ಮಾಡಲಾಗಿದೆ ಎನ್ನಲಾಗಿದೆ.
ಸಮಾಜ ಕಲ್ಯಾಣ ಖಾತೆ ಬಿಟ್ಟುಕೊಟ್ಟ ಸಚಿವ ಗೋವಿಂದ ಕಾರಜೋಳಗ ಎರಡು ಹೆಚ್ಚುವರಿ ಖಾತೆ ನೀಡಲಾಗಿದೆ. ಸಿಟಿ ರವಿ ರಾಜೀನಾಮೆ ಅಂಗೀಕಾರ ನಂತರ ಸಿಟಿ ರವಿ ಬಳಿ ಇದ್ದ ಎರಡೂ ಖಾತೆಗಳನ್ನು ಕಾರಜೋಳಗೆ ನೀಡಲಾಗುವುದು. ಪ್ರವಾಸೋದ್ಯಮ, ಕನ್ನಡ-ಸಂಸ್ಕೃತಿ ಖಾತೆ ಹೊಣೆ ನೀಡಲಾಗುವುದು ಎನ್ನಲಾಗಿದೆ. ಈಗ ಕಾಳಜೋಳಗೆ ಪಿಡಬ್ಲ್ಯೂಡಿ ಜೊತೆ 2 ಹೆಚ್ಚುವರಿ ಖಾತೆ ಹೊಣೆ ನೀಡಿದಂತಾಗುತ್ತದೆ.
ನಿನ್ನೆಯೇ ಖಾತೆ ಬದಲಾವಣೆ ಚರ್ಚೆ ವೇಳೆ ಕಾರಜೋಳಗೆ ಸಿಎಂ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ನನಗೆ ಒಂದೇ ಖಾತೆ ಸಾಕಿತ್ತು ಎಂದಿದ್ದ ಕಾರಜೋಳ. ಆದರೆ ನಂ.1ರ ನಂತರ ಸಿಟಿ ರವಿ ರಾಜೀನಾಮೆ ಆಂಗೀಕಾರ ಆಗುತ್ತೆ. ಅಂಗೀಕಾರವಾದ ಬಳಿಕ ಅವರ ಖಾತೆ ಜವಾಬ್ದಾರಿ ನಿಮ್ಮ ಹೆಗಲಿಗೆ ಬೀಳಲಿದೆ. ಖಾತೆ ಬಗ್ಗೆ ಬೇಸರ ಮಾಡಿಕೊಳ್ಳದೇ ಸಹಕರಿಸಿ ಎಂದ ಸಿಎಂ ಮನವಿ ಮಾಡಿದ್ದಾರೆ ಎನ್ನಲಾಗಿದೆ.