Publish Date: Mon, 12 Oct 2020 (09:24 IST)
Updated Date: Mon, 12 Oct 2020 (09:57 IST)
ಬೆಂಗಳೂರು : ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬೆಂಗಳೂರಿನ ಶ್ರೀರಾಮಪುರ ಪೊಲೀಸರು ಬಂಧಿಸಿದ್ದಾರೆ.
2 ದಿನಗಳ ಹಿಂದೆ 4 ವರ್ಷದ ಬಾಲಕಿ ಅಪಹರಿಸಿ ದೌರ್ಜನ್ಯ ಎಸಗಿದ್ದ. ಶ್ರೀರಾಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕೇಸ್ ನಡೆದಿದೆ. ಮುಂಜಾನೆ ಆರೋಪಿ ದಿನೇಶ್ ಬಂಧನಕ್ಕೆ ಪೊಲೀಸರು ತೆರಳಿದ್ದ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನಿಸಿದ್ದ.
ತಕ್ಷಣ ಆರೋಪಿ ದಿನೇಶ್ ಕಾಲಿಗೆ ಪೊಲೀಸರಿಂದ ಫೈರಿಂಗ್ ಮಾಡಿ ಆರ್.ಆರ್.ಕೆ. ಕಲ್ಯಾಣಮಂಟಪ ಬಳಿ ಆರೋಪಿ ದಿನೇಶ್ ಸೆರೆಹಿಡಿಯಲಾಗಿದೆ. ಗಾಯಾಳು ಆರೋಪಿಗೆ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.
pavithra
Publish Date: Mon, 12 Oct 2020 (09:24 IST)
Updated Date: Mon, 12 Oct 2020 (09:57 IST)