Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಹುಬ್ಬಳ್ಳಿ : ಸಚಿವ ಸುಧಾಕರ್ ರ ಏಕಪತ್ನಿ ವ್ರತಸ್ಥ ಹೇಳಿಕೆ ಸರಿಯಲ್ಲ. ಡಾ.ಕೆ.ಸುಧಾಕರ್ ಆ ರೀತಿ ಹೇಳಿಕೆ ಕೊಡಬಾರದಿತ್ತು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಬೇರೆಯವರನ್ನು ನೋಡಿ ನಾವು ಅನುಸರಿಸೋದಲ್ಲ ನಮಗೆ ನಾವು ಸರಿಯಾಗಿ ಇರಬೇಕು. ಏನೇ ಇದ್ದರೂ ರಾಜಕಾರಣೆಗಳಿಗೆ ನೈತಿಕತೆ ಮುಖ್ಯ ಎಂದು ರಮೇಶ್ ಸಿಡಿ ಕೇಸ್ ಬಗ್ಗೆ ಕೆಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಭಾರತೀಯ ರಾಜಕಾರಣಿಗಳಿಗೆ ವಿಶೇಷವಾದ ಗೌರವವಿದೆ. ನಮ್ಮನ್ನು ಅನುಸರಿಸುವವರು ಇರ್ತಾರೆ. ಹಾಗಾಗಿ ಗೌರವದಿಂದ ಇರಬೇಕು. ಬೆಳಗಾವಿ ಬೈಎಲೆಕ್ಷನ್ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಪ್ರಧಾನಿ, ಸುರೇಶ್ ಅಂಗಡಿಯವರು ಮಾಡಿದ ಅಭಿವೃದ್ಧಿ ಕೆಲಸದ ಮೇಲೆ ಉಪ ಚುನಾವಣೆ ನಡೆಯುತ್ತೆ ಎಂದು ತಿಳಿಸದ್ದಾರೆ.