Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು : ಸಚಿವ ಸುಧಾಕರ್ ಏಕಪತ್ನಿವ್ರತಸ್ಥ ಹೇಳಿಕೆ ವಿವಾದ ಮಾಜಿ ಸಿಎಂ ಸಿದ್ಧರಾಮಯ್ಯ ಬಿಜೆಪಿಯವರಿಗೆ ಹೊಸ ಸವಾಲು ಹಾಕಿದ್ದಾರೆ.
ಯಾವ ಶಾಸಕರೂ ಏಕಪತ್ನಿವ್ರತಸ್ಥರಲ್ಲ. ಸುಧಾಕರ್ ಹೇಳಿಕೆ ಬಿಜೆಪಿ ಶಾಸಕರಿಗೂ ಅನ್ವಯವಾಗುತ್ತೆ. ಸ್ವೀಕರ್ ಕಾಗೇರಿ , ಸಿಎಂ ಬಿಎಸ್ ವೈ ಸೇರಿ ಎಲ್ಲರಿಗೂ ಅನ್ವಯವಾಗುತ್ತೆ. ಹಾಗಾಗಿ ತಮ್ಮ ವೈವಾಹಿಕ ಸಂಬಂಧವನ್ನು ಸ್ಪಷ್ಟಪಡಿಸಬೇಕು ಎಂದು ಟ್ವೀಟರ್ ನಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಸವಾಲು ಹಾಕಿದ್ದಾರೆ.
ಅಲ್ಲದೆ ಸುಧಾಕರ್ ವಿರುದ್ಧ ಕಾನೂನು ಕ್ರಮಕ್ಕೆ ಬಿಗಿಪಟ್ಟು ಹಿಡಿದಿದ್ದಾರೆ. ಸುಧಾಕರ್ ಹೇಳಿಕೆಗೆ ಬಿಜೆಪಿ ಶಾಸಕರು ವಿರೋಧಿಸುವುದಾದ್ರೆ ಸಿಎಂಗೆ ಪತ್ರ ಬರೆದು ತನಿಖೆಗೆ ಮನವಿ ಮಾಡಬೇಕು. ಸುಧಾಕರ್ ಹೇಳಿಕೆಯನ್ನ ಬಿಜೆಪಿಯವರು ಒಪ್ಪಿಕೊಳ್ಳೋದಾದ್ರೆ. ತಕ್ಷಣ ಸುಧಾಕರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಐಪಿಸಿ ಸೆಕ್ಷನ್ 495 ಅಡಿ ಸುಧಾಕರ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಸುಧಾಕರ್ ಹೇಳಿಕೆ ಬಹುಪತ್ನಿತ್ವ ಕಾನೂನು ಪ್ರಕಾರ ಅಪರಾಧ ಎಂದು ಟ್ವೀಟರ್ ನಲ್ಲಿ ಮಾಜಿ ಸಿಎಂ ಆಗ್ರಹಿಸಿದ್ದಾರೆ.