ಲಾರ್ಡ್ಸ್: ಈ ಪಂದ್ಯದಲ್ಲಾದರೂ ತನ್ನ ಬ್ಯಾಟಿಂಗ್ ಸುಧಾರಿಸೀತು ಎಂಬ ಲೆಕ್ಕಾಚಾರಗಳನ್ನು ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳು ತಲೆಕೆಳಗಾಗಿಸಿದ್ದಾರೆ.
ಮಳೆ ಬಂದ ಒದ್ದೆ ಪಿಚ್ ನಲ್ಲಿ ಬ್ಯಾಟಿಂಗ್ ಕಷ್ಟವೇ. ಆದರೆ ಕಳೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿಯಾದರೂ ನಿಂತು ಆಡುವ ಧೈರ್ಯ ತೋರಿದ್ದರು. ಆದರೆ ಈ ಪಂದ್ಯದಲ್ಲಿ ಅವರೂ 28 ರನ್ ಗಳಿಗೆ ಪೆವಿಲಿಯನ್ ಸೇರಿಕೊಂಡರು. ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಕೇವಲ 107 ಕ್ಕೆ ಆಲೌಟ್ ಆಗಿದೆ.
ವಿಶೇಷವಾಗಿ ಜೇಮ್ಸ್ ಆಂಡರ್ಸನ್ ಮಾರಕ ದಾಳಿ ಸಂಘಟಿಸಿ 5 ವಿಕೆಟ್ ಕಿತ್ತರು. ಭಾರತದ ಪರ ರವಿಚಂದ್ರನ್ ಅಶ್ವಿನ್ 29 ರನ್ ಗಳಿಸಿ ಗರಿಷ್ಠ ಸ್ಕೋರರ್ ಆದರು. ಆಗಾಗ ಮಳೆ ಬಂದಿದ್ದೂ ಭಾರತೀಯ ಬ್ಯಾಟ್ಸ್ ಮನ್ ಗಳ ಸಂಷಕ್ಟಕ್ಕೆ ಕಾರಣವಾಯಿತು. ಆದರೆ ಇದರಿಂದ ಭಾರತ ಬ್ಯಾಟ್ಸ್ ಮನ್ ಗಳ ಪ್ರತಿಷ್ಠೆ ಹರಾಜಾಯಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.