Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬೆಂಗಳೂರಿನ 510 ಪಬ್, ಬಾರ್‌ಗಳ ಮೇಲೆ ಸಿಸಿಬಿ ದಾಳಿ

ಬೆಂಗಳೂರಿನ 510 ಪಬ್, ಬಾರ್‌ಗಳ ಮೇಲೆ ಸಿಸಿಬಿ ದಾಳಿ
ಬೆಂಗಳೂರು , ಭಾನುವಾರ, 10 ಸೆಪ್ಟಂಬರ್ 2023 (09:49 IST)
ಬೆಂಗಳೂರು : ಅಪ್ರಾಪ್ತ ವಿದ್ಯಾರ್ಥಿಗಳಿಗೆ ಮದ್ಯ ಸಪ್ಲೈ ಮಾಡುತ್ತಿದ್ದ ಆರೋಪದ ಹಿನ್ನೆಲೆ ಬೆಂಗಳೂರಿನ ಪಬ್, ಬಾರ್, ಹುಕ್ಕಾಬಾರ್ಗಳ ಮೇಲೆ ಸಿಸಿಬಿ ಪೊಲೀಸರು ದೊಡ್ಡ ಮಟ್ಟದ ರೇಡ್ ನಡೆಸಿ ಕೇಸ್ ಜಡಿದಿದ್ದಾರೆ. ಎಂಎಲ್ಎ ಸಂಬಂಧಿಕರು ಎಂದು ಹೇಳಿಕೊಂಡಿರುವ ಅಪ್ರಾಪ್ತರು ರೇಡ್ ವೇಳೆ ಪೊಲೀಸರ ಜೊತೆ ವಾಗ್ವಾದ ನಡೆಸಿದ ಘಟನೆ ಕೂಡ ನಡೆದಿದೆ.

ಶುಕ್ರವಾರ ರಾತ್ರಿ ಬೆಂಗಳೂರು ಸಿಸಿಬಿ ಪೊಲೀಸರು ಬೆಂಗಳೂರಿನ 510 ಕ್ಕೂ ಹೆಚ್ಚು ಪಬ್, ಬಾರ್, ಹುಕ್ಕಾಬಾರ್ಗಳ ಮೇಲೆ ದಾಳಿ ನಡೆಸಿದರು. ದಾಳಿ ವೇಳೆ ಅಬಕಾರಿ ನಿಯಮ ಸೇರಿದಂತೆ ಕಾನೂನುಗಳನ್ನು ಉಲ್ಲಂಘನೆ ಮಾಡುತ್ತಿದ್ದ ಆರೋಪದ ಮೇಲೆ ಕೆಲ ಪಬ್ಗಳ ಮೇಲೆ ಕೇಸ್ ಜಡಿಯಲಾಗಿದೆ.

ಇತ್ತೀಚೆಗೆ ಶಾಲಾ ಮುಖ್ಯಸ್ಥರು ಪೊಲೀಸ್ ಆಯುಕ್ತರಿಗೆ ಮನವಿಯೊಂದನ್ನು ಕೊಟ್ಟಿದ್ದರು. ಅಪ್ರಾಪ್ತ ವಿದ್ಯಾರ್ಥಿಗಳಿಗೆ ಮದ್ಯ ನೀಡಲಾಗುತ್ತಿದೆ. ಇದನ್ನು ಸರಿಪಡಿಸುವಂತೆ ಕೇಳಿಕೊಂಡಿದ್ದರು. ಈ ಬಗ್ಗೆ ಕಮಿಷನರ್ ಅವರಿಂದ ನಿರ್ದೇಶನ ಪಡೆದು ಪೊಲೀಸರು ಏಕಕಾಲಕ್ಕೆ ದಾಳಿ ಮಾಡಿ, ತಪಾಸಣೆ ನಡೆಸಿ ನಿಯಮ ಉಲ್ಲಂಘನೆ ಆಗುತ್ತಿರುವುದನ್ನು ಪತ್ತೆ ಮಾಡಿದ್ದಾರೆ. 

ಅನಧಿಕೃತವಾಗಿ ಪಬ್ಗಳಲ್ಲಿ ಧೂಮಪಾನಕ್ಕೆ ಅವಕಾಶ ಕೊಡಲಾಗಿದೆ. ಪ್ರತಿ ಪಬ್ಗಳಲ್ಲಿ ಧೂಮಪಾನಕ್ಕೆ ಪ್ರತ್ಯೇಕ ರೂಂ ವ್ಯವಸ್ಥೆ ಇರಬೇಕು. ಇದಲ್ಲದೆ ಅಬಕಾರಿ ನಿಯಮಗಳನ್ನು ಸಹ ಉಲ್ಲಂಘನೆ ಮಾಡಿದ್ದಾರೆ. ಅಪ್ರಾಪ್ತರಿಗೆ ಮದ್ಯ ನೀಡುತ್ತಿರೋದು ಕಂಡುಬಂದಿದ್ದು, ಜುವೆನಿಲ್ ಜಸ್ಟಿಸ್ ಆಕ್ಟ್ ಹಾಗೂ ಕೋಪ್ಟಾ ಆಕ್ಟ್ ಅಡಿ ಕೇಸ್ ದಾಖಲಿಸಿಕೊಳ್ಳಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಜೈವಿಕ ಇಂಧನ ಮೈತ್ರಿಕೂಟಕ್ಕೆ ನರೇಂದ್ರ ಮೋದಿ ಚಾಲನೆ