ಬೆಂಗಳೂರು : ಬೆಳ್ಳಂಬೆಳಿಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಗ್ ಶಾಕ್ ಕಾದಿದ್ದು, ಅವರ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ಕೇಸ್ ತನಿಖೆ ಹಿನ್ನಲೆಯಲ್ಲಿ ಬೆಳಿಗ್ಗೆ 2 ಇನ್ನೋವಾ ಕಾರ ಗಳಲ್ಲಿ ಬಂದಿರೋ 7 ಅಧಿಕಾರಿಗಳು ಡಿಕೆ ಶಿವಕುಮಾರ್ ಅವರ ಬೆಂಗಳೂರಿನ ಸದಾಶಿವನಗರದಲ್ಲಿರುವ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಅಲ್ಲದೇ ಬೆಂಗಳೂರು ಮಾತ್ರವಲ್ಲ ಕನಕಪುರದಲ್ಲಿರುವ ದೊಡ್ಡಹಾಲಹಳ್ಳಿಯಲ್ಲಿರುವ ಡಿಕೆಶಿ ನಿವಾಸದ ಮೇಲೂ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. 5 ಜನರ ಸಿಬಿಐ ತಂಡದಿಂದ ರೇಡ್ ಮಾಡಿದ್ದು, ಡಿಕೆಶಿ ಮನೆ ಸೇರಿ ಹಲವೆಡೆ ಸಿಬಿಐ ದಾಳಿ ನಡೆಸಿದೆ ಎನ್ನಲಾಗಿದೆ.