Publish Date: Mon, 05 Oct 2020 (08:18 IST)
Updated Date: Mon, 05 Oct 2020 (08:19 IST)
ಬೆಂಗಳೂರು : ವ್ಯಕ್ತಿಗಳ ಗುಣ ಸ್ವಭಾವವನ್ನು ಅವರ ರಾಶಿ ನೋಡಿ ಮಾತ್ರವಲ್ಲ ಅವರು ಹುಟ್ಟಿದ ತಿಂಗಳುಗಳ ಮೂಲಕ ಕೂಡ ತಿಳಿದುಕೊಳ್ಳಬಹುದು. ಹಾಗಾದ್ರೆ ಅಕ್ಟೋಬರ್ ತಿಂಗಳಿನಲ್ಲಿ ಹುಟ್ಟಿದವರ ಗುಣಸ್ವಭಾವ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ಇವರು ಬುದ್ಧಿವಂತ ಹಾಗೂ ಸೌಂದರ್ಯ ಪ್ರಿಯ ವ್ಯಕ್ತಿಗಳಾಗಿರುತ್ತೀರಿ. ಹಣ ಮಾಡುವ ಬಗ್ಗೆ ತಿಳುವಳಿಕೆ ಇರುತ್ತದೆ. ಸಮಸ್ಯೆಗಳನ್ನು ಕ್ಷಣ ಮಾತ್ರದಲ್ಲಿ ಪರಿಹರಿಸಿಕೊಳ್ಳುತ್ತೀರಿ. ಎಷ್ಟೇ ಚಿಂತೆಯಿದ್ದರೂ ಯಾವಾಗಲೂ ಖುಷಿಯಾಗಿರುತ್ತೀರಿ. ಕೋಮಲ ಸ್ವಭಾವದವರಾಗಿರುತ್ತೀರಿ. ನಿಮ್ಮ ರಹಸ್ಯವನ್ನು ಯಾರಿಗೂ ಹೇಳುವುದಿಲ್ಲ. ನಿಮ್ಮ ಪ್ರಯಾಣ ಮಾಡುವುದೆಂದರೆ ತುಂಬಾ ಇಷ್ಟ. ಸರಳವಾದ ಜೀವನವನ್ನು ನಡೆಸಲು ಬಯಸುತ್ತೀರಿ.