Publish Date: Fri, 15 May 2020 (17:06 IST)
Updated Date: Fri, 15 May 2020 (17:07 IST)
ಲಾಕ್ ಡೌನ್ ನಲ್ಲಿ ಪ್ರತಿಭಟನೆ ನಡೆಸಿದ ಕಾರ್ಪೋರೇಟರ್ ಪತಿ ಹಾಗೂ ಪುತ್ರನ ವಿರುದ್ಧ ಕೇಸ್ ದಾಖಲಾಗಿದೆ.
ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ಬಟ್ಟೆ ಅಂಗಡಿ ಶುರುಮಾಡಿದ್ದ ಕಾರಣಕ್ಕಾಗಿ ಸ್ಥಳೀಯರು ಸೆಗಣಿ ಎರಚಿ ಕಾರ್ಪೋರೇಟರ್ ಪತಿ ಮೇಲೆ ಹಲ್ಲೆ ನಡೆಸಿದ್ದರು.
ಘಟನೆ ಖಂಡಿಸಿ ಕಾರ್ಪೋರೇಟರ್ ಪ್ರತಿಭಾ ಅವರ ಪತಿ ಧನರಾಜ್ ಹಾಗೂ ಮಗ ಪ್ರತಿಭಟನೆ ನಡೆಸಿದ್ದರು.
ರಸ್ತೆ ನಡುವೆ ಪ್ರತಿಭಟನೆ ನಡೆಸಿದಕ್ಕಾಗಿ ಧನರಾಜ್ ಹಾಗೂ ಆತನ ಪುತ್ರ ಅಲ್ಲದೇ ಪ್ರತಿಭಟನೆಯಲ್ಲಿ ಪಾಲ್ಗೊಂಡವರ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ. ಅಲ್ಲದೇ ಧನರಾಜ್ ಮೇಲೆ ಸಗಣಿ ಎಸೆದವರ ವಿರುದ್ಧವೂ ಕೇಸ್ ದಾಖಲಾಗಿದೆ.