ಬೆಂಗಳೂರು : ಸಿದ್ದರಾಮಯ್ಯ ಮಂಡಿಸುವುದಕ್ಕೂ ಮುನ್ನ ಪೀಠಿಕೆಯಲ್ಲಿ ಕರ್ನಾಟಕ ರತ್ನ ಡಾ. ರಾಜ್ ಕುಮಾರ್ ಅವರ ಸಿನಿಮಾದ ಹಾಡೊಂದನ್ನು ಉಲ್ಲೇಖಿಸಿ ತಮ್ಮ ಉದ್ದೇಶವನ್ನು ಸ್ಪಷ್ಟಪಟಿಸಿದ್ದಾರೆ. ಆಗದು ಎಂದು ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ಎಂಬಂತೆ ನಾವು ಅವಿರತವಾಗಿ ನಾಡಿನ ಅಭಿವೃದ್ಧಿಗಾಗಿ ಶ್ರಮಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಬಸವಣ್ಣ ಮತ್ತು ಅಂಬೇಡ್ಕರ್ ಹಾದಿಯಲ್ಲಿ ಕ್ರಾಂತಿಕಾರಿ ಯೋಜನೆಗಳನ್ನು ನೀಡಲಿದ್ದೇವೆಂದು ನುಡಿದ ಸಿಎಂ ಸಿದ್ದರಾಮಯ್ಯ,ತಾವು ತಿನ್ನುವ ಅನ್ನದಲ್ಲಿ ಒಂದು ಪಾಲನ್ನು ಹಸಿದವರಿಗೆ ನೀಡಬೇಕೆಂಬ ಬಸವಾದಿ ಶರಣರ ತತ್ವಗಳೇ ಇಂದು ನಮಗೆ ಸಮ ಸಮಾಜದ ನಿರ್ಮಾಣಕ್ಕೆ ದಾರಿದೀಪವಾಗಿದೆ ಎಂದು ನುಡಿದ ಸಿದ್ದರಾಮಯ್ಯ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನಮ್ಮ ಯೋಜನೆಗಳು ದೊರೆಯಲಿದೆ ಎಂದು ನುಡಿದರು. ಈ ಆಯವ್ಯಯವು ನಮ್ಮ ರಾಜ್ಯದ ಮುಂದಿನ ನಡೆಯನ್ನು ನಿರೂಪಿಸುತ್ತದೆ ಎಂದು ನುಡಿದ ಸಿಎಂ ಸಿದ್ದರಾಮಯ್ಯ, ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ನ್ಯಾಯಗಳೊಂದಿಗೆ ನಾವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದೇವೆ ಎಂದು ಸಿಎಂ ಹೇಳಿದರು.