ಬೆಂಗಳೂರು : ಸಿಎಂ ಸಿದ್ದರಾಮಯ್ಯ ಪಶುಸಂಗೋಪನೆ ಇಲಾಖೆಗೆ ರಾಜ್ಯ ಬಜೆಟ್ ನಲ್ಲಿ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ. ಅವುಗಳಲ್ಲಿ ಮುಖ್ಯವಾದುವು ಹೀಗಿದೆ
• ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿ 10 ಸಾವಿರ ಮಂದಿಗೆ ಸಹಾಯಧನ
• ಅಮೃತ ಮಹಲ್, ಹಳ್ಳಿಕಾರ್, ಖಿಲಾರಿ ರಾಸುಗಳ ಸಂವರ್ಧನೆಗೆ ಕೃಮʼ
• ರೈತ ಮಹಿಳೆಯರಲ್ಲಿ ಹೈನುಗಾರಿಕೆ ಪ್ರೋತ್ಸಾಹಕ್ಕೆ ಹಸು ಎಮ್ಮೆ ಸಾಲ ಪಡೆಯಲು ಶೇ 6 ಬಡ್ಡಿದರದಲ್ಲಿ ಸಹಾಯಧನ
• ಹಂದಿ ಮತ್ತು ಕೋಳಿ ಸಾಕಾಣಿಕೆ ಪ್ರೋತ್ಸಾಹಿಸಲು ಆಸಕ್ತ ರೈತರಿಗೆ ತರಬೇತಿ
•
ಜಿಲ್ಲಾ ಹಂತದಲ್ಲಿರುವ ಪಶು ವೈದ್ಯಕೀಯ ಕ್ಲಿನಕ್ ಗಳನ್ನು ತಾಲೂಕು ಹಂತಕ್ಕೆ ವಿಸ್ತರಿಸಲು ಕ್ರಮ. ಪ್ರಥಮ ಹಂತದಲ್ಲಿ 20 ತಾUಲಕು ಪಶು ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು 10 ಕೋಟಿ ರೂ.
• ಪರಂಪರಾನುಗತವಾಗಿ ಕುರಿ, ಮೇಕೆ ಸಾಕಣೆ ಮಾಡುತ್ತಿರುವವರ ಹಿತರಕ್ಷಣೆಗೆ ಹಲವು ಕ್ರಮ
• ವಲಸೆ ಕುರಿಗಾಹಿಗಳ ಮೇಲೆ ದೌರ್ಜನ್ಯ ತಡೆ ಕಾಯ್ದೆ ಜಾರಿ
• ಸಂಚಾರಿ ಕುರಿಗಾಹಿಗಳೀರುವ ಜಾಗದಲ್ಲೇ ಸರ್ಕಾರಿ ವೈದ್ಯರಿಂದ ಲಸಿಕೆ, ಗುರುತಿನ ಚೀಟಿ ವಿತರಣೆ
• ಕುರಿಗಾಹಿಗಳ ಮಕ್ಕಳಿಗೆ ಸರ್ಕಾರಿ ವಸತಿ ಶಾಲೆ ಪ್ರವೇಶಕ್ಕೆ ಆದ್ಯತೆ