Publish Date: Sat, 28 Mar 2020 (19:55 IST)
Updated Date: Sat, 28 Mar 2020 (19:57 IST)
ಮನೆಯಿಂದ ಬೆತ್ತಲಾಗಿ ಓಡಿದ ವ್ಯಕ್ತಿಯೊಬ್ಬ ವೃದ್ಧೆಯೊಬ್ಬಳಿಗೆ ಮಾಡಬಾರದ ಕೆಲಸ ಮಾಡಿದ್ದಾನೆ.
ಶ್ರೀಲಂಕಾಕ್ಕೆ ಹೋಗಿದ್ದ ವ್ಯಕ್ತಿ ತಮಿಳುನಾಡಿನ ಥೇನಿ ಜಿಲ್ಲೆಗೆ ಬಂದಿದ್ದನು. ಹೀಗಾಗಿ ಆತನನ್ನು ಹೋಂ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು.
ಹೋಂ ಕ್ವಾರಂಟೈನ್ ಸಂದರ್ಭದಲ್ಲಿ ಖಿನ್ನತೆಗೆ ಒಳಗಾದ ವ್ಯಕ್ತಿ ಬಟ್ಟೆ ಬಿಚ್ಚಿ ಬೀದಿಯಲ್ಲಿ ಓಡಿದ್ದಾನೆ. ಆಗ 85 ವರ್ಷದ ವೃದ್ಧೆಗೆ ಕಚ್ಚಿದ್ದಾನೆ. ಇದರಿಂದಾಗಿ ವೃದ್ಧೆ ಸಾವನ್ನಪ್ಪಿದ್ದಾಳೆ.
ಆರೋಪಿಯನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.