ಹಲವು ಬಾರಿ ಎಚ್ಚರಿಕೆ ನೀಡಿದರೂ ಪತ್ನಿ ತನಗಿಂತ ಮಂದೆ ನಡೆಯುತ್ತಿದ್ದಾಳೆ ಎಂದು ಆರೋಪಿಸಿ ಸೌದಿ ಮೂಲದ ವ್ಯಕ್ತಿಯೊಬ್ಬ ಪತ್ನಿಗೆ ವಿಚ್ಚೇದನ ನೀಡಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸೌದಿ ಅರೇಬಿಯಾದಲ್ಲಿ ಕ್ಷುಲ್ಲಕ ಕಾರಣಗಳಿಗಾಗಿ ವಿಚ್ಚೇದನ ನೀಡುತ್ತಿರುವ ಪ್ರಕರಣಗಳು ಹೆಚ್ಚಳವಾಗುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಸರಕಾರ ನೂತನ ದಂಪತಿಗಳಿಗೆ ಸಮಾಲೋಚನೆ ಸೇವೆಗಳನ್ನು ಒದಗಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸೌದಿ ಮೂಲದ ವ್ಯಕ್ತಿಯೊಬ್ಬ ವಾಕಿಂಗ್ ಮಾಡುತ್ತಿರುವ ಸಂದರ್ಭದಲ್ಲಿ ತನ್ನ ಹಿಂದೆ ನಡೆಯುತ್ತಿರಬೇಕು ಎಂದು ಹೇಳಿದ್ದಾನೆ. ಆದಾಗ್ಯೂ ಪತ್ನಿ ಮುಂದೆ ನಡೆಯುತ್ತಿರುವುದರಿಂದ ಆಕ್ರೊಶಗೊಂಡು ಪತ್ನಿಗೆ ವಿಚ್ಚೇದನ ನೀಡಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮತ್ತೊಂದು ಪ್ರಕರಣದಲ್ಲಿ, ಮನೆಗೆ ಬಂದ ಅತಿಥಿಗಳಿಗೆ ಭಕ್ಷ್ಯದಲ್ಲಿ ಕುರಿಯ ತಲೆ ಇಡಲು ಮರೆತಿದ್ದಾಳೆ ಎಂದು ಪತಿಯೊಬ್ಬ ಪತ್ನಿಗೆ ವಿಚ್ಚೇದನ ನೀಡಿರುವ ಘಟನೆ ವರದಿಯಾಗಿದೆ.
ಮತ್ತೊಂದು ಸಂದರ್ಭದಲ್ಲಿ, ಹನಿಮೂನ್ ಸಂದರ್ಭದಲ್ಲಿ ಪಾದದ ಬಳೆಗಳನ್ನು ಧರಿಸಿದ್ದಾಳೆ ಎಂದು ಆರೋಪಿಸಿ ಪತಿಯೊಬ್ಬ ಪತ್ನಿಗೆ ವಿಚ್ಚೇದನ ನೀಡಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ವಿವಾಹ ನೋಂದಣಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ಹುಮೂದ್ ಅಲ್ ಶಿಮ್ಮಾರಿ ಪ್ರಕಾರ, ದೇಶದಲ್ಲಿ ಕ್ಷುಲ್ಲಕ ಕಾರಣಗಳಿಗೆ ವಿಚ್ಚೇದನ ನೀಡುವುದು ಹೆಚ್ಚುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.