Publish Date: Wed, 04 Sep 2019 (13:25 IST)
Updated Date: Wed, 04 Sep 2019 (13:27 IST)
ಬೆಂಗಳೂರು : ಹಿಂದೂ ಹಿಂದೂ ಎಂದು ಹೇಳುವವರು ಗಣೇಶ ಹಬ್ಬದ ದಿನ ತಂದೆಗೆ ಎಡೆ ಇಡಲು ಬಿಡುತ್ತಿದ್ದರೆ ಏನಾಗುತ್ತಿತ್ತು ಎಂದು ಕಾಂಗ್ರೆಸ್ ನಾಯಕ ಸಿಎಂ ಇಬ್ರಾಹಿಂ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಹಿಂದೂ ಎಂದು ಹೇಳುವವರು ಗಣೇಶ ಹಬ್ಬದಂದು ಒಂದು ದಿನವಾದರೂ ಅವರ ತಂದೆಗೆ ಎಡೆ ಇಡುವುದಕ್ಕೆ ಬಿಡುತ್ತಿದ್ದರೆ ಏನಾಗುತ್ತಿತ್ತು. ಎರಡು ವರ್ಷ ಸುಮ್ಮನಿದ್ರಲ್ವಾ. ಇದೊಂದು ಅಮಾನ್ಯವಾದಂತಹ ಕ್ರಮವಾಗಿದೆ ಎಂದು ಹೇಳಿದ್ದಾರೆ.
ವಿನಾಶಕಾಲೇ ವಿಪರೀತ ಬುದ್ಧಿ. ಇದರಿಂದ ಅವರು ಏನಾದರೂ ಕಾಂಗ್ರೆಸ್ ನ್ನು ಧಮನ ಮಾಡಬೇಕು ಎಂಬ ಕನಸು ಕಂಡಿದ್ದರೆ ಅದು ಹಗಲು ಕನಸಾಗಿರುತ್ತದೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.