Publish Date: Wed, 04 Sep 2019 (09:43 IST)
Updated Date: Wed, 04 Sep 2019 (09:45 IST)
ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ಮಾಜಿ ಸಚಿವ ಡಿಕೆ ಶಿವಕುಮಾರ್ ರನ್ನು ನಿನ್ನೆ ರಾತ್ರಿ ಬಂಧಿಸಿದ್ದಾರೆ. ಆದರೆ ಬಂಧನವಾದ ಮೇಲೂ ಅವರ ಖಾತೆಯಿಂದ ಸರಣಿ ಟ್ವೀಟ್ ಆಗಿದ್ದು ನೋಡಿ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಬಂಧನವಾದ ಮೇಲೂ ಡಿಕೆಶಿ ಖಾತೆಯಿಂದ ಟ್ವೀಟ್ ಬಂದಿದ್ದು ಹೇಗೆ? ಹಾಗಿದ್ದರೆ ಡಿಕೆಶಿಗೆ ಟ್ವಿಟರ್ ಬಳಸಲು ಮೊಬೈಲ್ ನೀಡಿದ್ದು ಯಾರು? ಹಾಗಿದ್ದರೆ ಅವರ ಖಾತೆಯನ್ನು ನಿಭಾಯಿಸುತ್ತಿರುವವರು ಯಾರು ಎಂಬಿತ್ಯಾದಿ ಅನುಮಾನಗಳು ಟ್ವಿಟರಿಗರು ಹೊರ ಹಾಕಿದ್ದಾರೆ.