Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೈಕ್ ಮೇಲೆ ನಾಯಿ, ಬೆಕ್ಕು ಸೇರಿದಂತೆ ಕೆಲ ಸಾಕು ಪ್ರಾಣಿಗಳನ್ನು ಕರೆದೊಯ್ಯುವುದನ್ನು ಕಂಡಿದ್ದೇವೆ. ಆದರೆ, ಎಮ್ಮೆ ಮತ್ತು ಹಸುಗಳಂತಹ ದೈತ್ಯ ಪ್ರಾಣಿಗಳನ್ನು ಬೈಕ್ ಮೇಲೆ ಕರೆದುಕೊಂಡು ಹೋಗುವುದನ್ನು ಎಂದಾದರೂ ನೀವು ನೋಡಿದ್ದೀರಾ?
ವ್ಯಕ್ತಿಯೊಬ್ಬ ಗೂಳಿಯೊಂದನ್ನು ಬೈಕ್ನಲ್ಲಿ ಸಾಗಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ಹುಬ್ಬೇರಿಸಿದ್ದಾರೆ. ಅಲ್ಲದೆ, ಇದು ಸಾಮನ್ಯವಲ್ಲ… ನಿಜಕ್ಕೂ ನೀವು ಗ್ರೇಟ್ ಎನ್ನುವ ಮೂಲಕ ಬೈಕ್ ಸವಾರನನ್ನು ನೆಟ್ಟಿಗರು ಕೊಂಡಾಡಿದ್ದಾರೆ. ಗೂಳಿಯು ಬೈಕ್ನ ಹಿಂಬದಿಯ ಸೀಟಿನಲ್ಲಿ ಆರಾಮಾಗಿ ಕುಳಿತು ಪ್ರಯಾಣಿಸುತ್ತಿರುವ ದೃಶ್ಯ ನೋಡುಗರಿಗೆ ಅಚ್ಚರಿ ಉಂಟುಮಾಡಿದೆ. ಕೆಳಗೆ ಬೀಳದಿರಲೆಂದು ಗೂಳಿಯನ್ನು ಹಗ್ಗದಿಂದ ಕಟ್ಟಿರುವುದು .ಹೀಗಿರುವಾಗ ಒಬ್ಬನೇ ವ್ಯಕ್ತಿ ಕುಳಿತುಕೊಳ್ಳುವ ಸೀಟಿನಲ್ಲಿ ಗೂಳಿ ಯಾವುದೇ ಚಲನವಲನವಿಲ್ಲದೆ ಆರಾಮವಾಗಿ ಕುಳಿತಿರುವುದು ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ. ಬೈಕ್ ಸವಾರ ಸಮತೋಲಿತವಾಗಿ ಬೈಕ್ ಓಡಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬದಾಗಿದೆ.