Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪೊಲೀಸರಿಗೆ 10 ಸಾವಿರ ಮನೆ ನಿರ್ಮಾಣ: ಆರಗ ಜ್ಞಾನೇಂದ್ರ

ಪೊಲೀಸರಿಗೆ 10 ಸಾವಿರ ಮನೆ ನಿರ್ಮಾಣ: ಆರಗ ಜ್ಞಾನೇಂದ್ರ
bangalore , ಬುಧವಾರ, 15 ಡಿಸೆಂಬರ್ 2021 (20:05 IST)
ರಾಜ್ಯದ ಪೊಲೀಸ್ ಸಿಬ್ಬಂದಿಗಳಿಗಾಗಿ 10 ಸಾವಿರ ಮನೆ ನಿರ್ಮಾಣ ಮಾಡಲಾಗುವುದು ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದ್ದಾರೆ.
ಇಂದು ವಿಧಾನಸಭೆಯಲ್ಲಿ, ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಸದಸ್ಯ ಶಿವಲಿಂಗೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ರಾಜ್ಯದ ಪೊಲೀಸರು, ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಲು ಅನುಕೂಲವಾಗುವಂತೆ ಸೌಲಭ್ಯ ಒದಗಿಸಲು,ರಾಜ್ಯ ಸರಕಾರ ಬದ್ಧವಾಗಿದೆ. ರಾಜ್ಯದಲ್ಲಿ “ಪೊಲೀಸ್-ಗೃಹ ೨೦೨೫’ ಎಂಬ ಯೋಜನೆಯನ್ನು ಸರಿಸುಮಾರು ಹತ್ತು ಸಾವಿರ ವಸತಿ ಗೃಹಗಳನ್ನು, ಪೊಲೀಸ್ ಸಿಬ್ಬಂದಿಗಳಿಗೆ ಇನ್ನೂ ಐದು ವರ್ಷಗಳಲ್ಲಿ ಕಟ್ಟಿಕೊಡಲಾಗುವುದು ಎಂದು ಮಾಹಿತಿ ನೀಡಿದರು.
ಸದಸ್ಯರು ಎತ್ತಿದ, ಶಿಥಿಲಾವಸ್ಥೆಯಲ್ಲಿರುವ ಗಂಡಸಿ ಪೊಲೀಸ್ ಠಾಣೆ ಕುರಿತ ಪ್ರಶ್ನೆಗೆ ಸಚಿವರು “ರಾಜ್ಯದಲ್ಲಿ ಸುಮಾರು ಒಂದು ನೂರು ಪೊಲೀಸ್ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದ್ದು, ಹಳೆಯ ಹಾಗೂ ಶಿಥಿಲಗೊಂಡಿರುವ ಕಟ್ಟಡಗಳನ್ನು ದುರಸ್ಥಿ ಗೊಳಿಸಲಾಗುವುದೂ” ಎಂದು ಸಚಿವರು ತಿಳಿಸಿದರು.
“ಪೊಲೀಸ್ ಸಿಬ್ಬಂದಿಗಳಿಗೆ, ಕರ್ತವ್ಯ ನಿರ್ವಹಿಸಲು ಉತ್ತಮ ವಾತಾವರಣ ಹಾಗೂ ವಾಸಿಸಲು ಸುಸಜ್ಜಿತ ಮನೆಯನ್ನು ಒದಗಿಸುತ್ತೇವೆ” ಎಂದು ಸಚಿವರು ಸದನಕ್ಕೆ ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮುಂಬೈ ನಲ್ಲಿ‌ ಇಂದಿನಿಂದ ಶಾಲೆ ರೀ ಓಪನ್: ಆತಂಕದಲ್ಲಿ ಪೋಷಕರು