Publish Date: Sun, 25 Mar 2018 (09:13 IST)
Updated Date: Sun, 25 Mar 2018 (09:15 IST)
ಮೈಸೂರು: ಚುನಾವಣೆ ಪ್ರಚಾರಕ್ಕಾಗಿ ರಾಜ್ಯಕ್ಕೆ ಆಗಮಿಸುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೇವಾಲಯ, ಮಠಗಳಿಗೆ ಭೇಟಿ ನೀಡುತ್ತಿರುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ವ್ಯಂಗ್ಯವಾಡಿದ್ದಾರೆ.
ಕರಾವಳಿ ಪ್ರವಾಸ ಮಾಡಿದ್ದಾಗ ಸಾಕಷ್ಟು ದೇವಸ್ಥಾನ, ಮಠಗಳಿಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ನಿನ್ನೆ ಮೈಸೂರು ಪ್ರವಾಸದ ಆರಂಭದಲ್ಲಿಯೇ ನಾಡದೇವತೆಗೆ ಪೂಜೆ ಸಲ್ಲಿಸಿದ್ದರು. ಇದಕ್ಕೆ ಬಿಎಸ್ ವೈ ಟ್ವಿಟರ್ ನಲ್ಲಿ ಲೇವಡಿ ಮಾಡಿದ್ದಾರೆ.
ರಾಹುಲ್ ಚಾಮುಂಡೇಶ್ವರಿ ದೇವತೆಯ ಸನ್ನಿಧಿಯಲ್ಲಿ ಆರತಿ ಸ್ವೀಕರಿಸುತ್ತಿರುವ ಫೋಟೋ ಹಾಕಿದ ಬಿಎಸ್ ವೈ ವೋಟು ನಿಮಿತ್ತಂ ಬಹುಕೃತ ವೇಷಂ ಎಂದು ವ್ಯಂಗ್ಯವಾಡಿದ್ದಾರೆ. ಇದಕ್ಕೆ ಸಾಕಷ್ಟು ಪರ-ವಿರೋಧ ಪ್ರತಿಕ್ರಿಯೆಗಳು ಬಂದಿವೆ. ಕೆಲವರು ಹಾಗಿದ್ದರೆ ದೇವಾಲಯಗಳಿಗೆ ಹೋಗುವುದು, ಭಕ್ತಿ ಎನ್ನುವುದು ಕೇವಲ ಬಿಜೆಪಿಯವರ ಸ್ವತ್ತೇ? ಎಂದು ಪ್ರಶ್ನಿಸಿದ್ದಾರೆ ಇನ್ನು ಕೆಲವರು ಚುನಾವಣೆ ಹತ್ತಿರ ಬಂದಾಗ ಮಂದಿರ, ಮಠಗಳು ನೆನಪಾಗುತ್ತಿವೆ ಇವರಿಗೆ ಎಂದು ಟೀಕಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ