ಬೇಲೂರಿನ ಶಾಸಕರಾದ ವೈಎನ್ ರುದ್ರೇಶ್ ಗೌಡರು ವಿಧಿವಶರಾಗಿರುವ ಸುದ್ದಿಯನ್ನು ತಿಳಿದು ಮನಸ್ಸಿಗೆ ನೋವಾಗಿದೆ. ರಾಜಕೀಯದಲ್ಲಿ ಅಜಾತ ಶತ್ರು , ಸಜ್ಜನ ರಾಜಕಾರಣಿಯಾಗಿದ್ದ ವೈಎನ್ ರುದ್ರೇಶ್ ಗೌಡರ ನಿಧನದಿಂದ ಜಿಲ್ಲೆಯ ಒಬ್ಬ ಸಜ್ಜನ ರಾಜಕಾರಣಿ ಯನ್ನು ಕಳೆದುಕೊಂಡಿದೆ ಎಂದು ಮಾಜಿ ಪ್ರಧಾನಿ ಹಾಗೂ ಲೋಕಸಭಾ ಸದಸ್ಯರಾದ ಹೆಚ್.ಡಿ.ದೇವೇಗೌಡರು ಸಂತಾಪ ಸೂಚಿಸಿದ್ದಾರೆ.
ಶ್ರೀಯುತರು ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಗಿ, ಲೋಕಸಭಾ ಸದಸ್ಯರಾಗಿ , ಶಾಸಕರಾಗಿ ಜಿಲ್ಲೆಯಲ್ಲಿ ಉತ್ತಮ ವಾಗ್ಮಿಯಾಗಿದ್ದರು. ಅವರ ಆತ್ಮಕ್ಕೆ ಚಿರ ಶಾಂತಿ ಕರುಣಿಸಲಿ ಎಂದು ಕೋರುತ್ತೇನೆ ಹಾಗೂ ಅವರ ಕುಟುಂಬದ ಸದಸ್ಯರಿಗೆ ಹಾಗೂ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ .