Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೆಗ್ಗಾನ್ ಆಸ್ಪತ್ರೆಗೆ ಬಿ ಎಸ್ ವೈ ಪುತ್ರ ವಿಜಯೇಂದ್ರ ಭೇಟಿ ನೀಡಿ ಪ್ರೇಮ್ ಸಿಂಗ್ ಆರೋಗ್ಯ ವಿಚಾರಣೆ

ಮೆಗ್ಗಾನ್ ಆಸ್ಪತ್ರೆಗೆ ಬಿ ಎಸ್ ವೈ ಪುತ್ರ ವಿಜಯೇಂದ್ರ ಭೇಟಿ ನೀಡಿ   ಪ್ರೇಮ್ ಸಿಂಗ್ ಆರೋಗ್ಯ ವಿಚಾರಣೆ
Shivamogga , ಮಂಗಳವಾರ, 16 ಆಗಸ್ಟ್ 2022 (19:55 IST)
ಮೆಗ್ಗಾನ್‌ ಆಸ್ಪತ್ರೆಗೆ ಬಿ.ವೈ ವಿಜಯೇಂದ್ರ ಭೇಟಿ ನೀಡಿ ಪ್ರೇಮ್‌ ಸಿಂಗ್‌ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಸಾವರ್ಕರ್‌ ಫ್ಲೆಕ್ಸ್‌ ನಿಂದ ಗಲಾಟೆ ನಡೆದಿದ್ದು, ಅದನ್ನ ಖಂಡಿಸುತ್ತೇನೆ. ಇತಿಹಾಸ ಗೊತ್ತಿಲ್ಲದ ಕೆಲ ಪುಡಾರಿಗಳು ಇಂಥಾ ಕೃತ್ಯ ನಡೆಸಿದ್ದಾರೆ ಎಂದರು. ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಚಾರ ಮಾಡಿದ್ದಾರೆ. ದೇಶದ ಸ್ವಾಭಿಮಾನಿ ಭಾರತೀಯರಿಗೆ ನೋವಾಗಿದೆ. ಮಂಗಳೂರು ಮತ್ತು ಶಿವಮೊಗ್ಗದಲ್ಲಿ ಇದು ಪುನರಾವರ್ತನೆ ಆಗುತ್ತಿದೆ ಎಂದರು. ಇನ್ನು ಇದರ ಹಿಂದೆ ಶಾಂತಿ ಕೆಡಿಸುವ ದೊಡ್ಡ ಪಿತೂರಿ ಇದೆ. ನಿನ್ನೆ ಮೊನ್ನೆ ಕ್ರಿಕೆಟ್‌ ಆಡಿಕೊಂಡಿದ್ದವರು ಚಾಕು ಹಿಡಿದಿದ್ದಾರೆ. ನಮ್ಮ ಸರ್ಕಾರ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ. ಇದರ ಹಿಂದೆ ಯಾವ ಸಂಘಟನೆ ಇದೆ ಎಂದು ಹೇಳಲ್ಲ. ಅದು ಎಲ್ಲರಿಗೂ ತಿಳಿದಿರುವ ಸೀಕ್ರೆಟ್‌ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಂಗ್ ಸಾನ್ ಸೂಕಿಗೆ 6 ವರ್ಷ ಜೈಲು