ಪ್ರಧಾನಿ ಆಂಗ್ ಸಾನ್ ಸೂ ಕಿ ಅವರಿಗೆ ಮತ್ತೆ 6 ವರ್ಷಗಳ ಜೈಲುಶಿಕ್ಷೆ ವಿಧಿಸಲಾಗಿದೆ. ಮಯನ್ಮಾರ್ ಜುಂಟಾ ನ್ಯಾಯಾಲಯವು ಸೋಮವಾರ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಆಂಗ್ ಸಾನ್ ಸೂಕಿ ಅವರಿಗೆ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಸೂಕಿ ಅವರಿಗೆ ನಾಲ್ಕು ಭ್ರಷ್ಟಾಚಾರ ವಿರೋಧಿ ಆರೋಪಗಳ ಅಡಿಯಲ್ಲಿ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅವರು ಮಾಧ್ಯಮಗಳೊಂದಿಗೆ ಮಾತನಾಡಲು ಅಧಿಕಾರ ಹೊಂದಿಲ್ಲದ ಕಾರಣ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮಯನ್ಮಾರ್ನ ನೈಪಿಟಾಲ್ ಜೈಲಿನಲ್ಲಿ ಅಂಗ್ ಸಾನ್ ಸೂಕಿ ಅವರನ್ನು ಇರಿಸಲಾಗಿದ್ದು, ಅವರಿಗೆ ಈಗಾಗಲೇ 11 ವರ್ಷಗಳ ಸೆರೆಮನೆ ವಾಸ ವಿಧಿಸಲಾಗಿತ್ತು.