Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಚಿಕ್ಕಬಳ್ಳಾಪುರ: ಮದುವೆ ಇಷ್ಟವಿಲ್ಲ ಎಂಬ ಕಾರಣಕ್ಕೆ ವಧು ಮದುವೆ ದಿನವೇ ನಾಪತ್ತೆಯಾದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ನಿನ್ನೆ ರಾತ್ರಿ ಆರತಕ್ಷತೆ ವೇಳೆ ಇದ್ದ ಯುವತಿ ಬೆಳಿಗ್ಗೆ ಮದುವೆ ಮುಹೂರ್ತದ ವೇಳೆ ನಾಪತ್ತೆಯಾಗಿದ್ದಾಳೆ. ಇದರಿಂದಾಗಿ ಮದುವೆ ಅರ್ಧಕ್ಕೇ ನಿಂತಿದೆ.
ಸುರೇಶ್ ಎಂಬವರ ಜೊತೆ ಯುವತಿಯ ಮದುವೆ ನಿಶ್ಚಯವಾಗಿತ್ತು. ಆದರೆ ಈಗಾಗಲೇ ಪ್ರವೀಣ್ ಎಂಬಾತನ ಜೊತೆ ಪ್ರೇಮ ಸಂಬಂಧ ಹೊಂದಿದ್ದ ಯುವತಿ ಆತನ ಜೊತೆಗೇ ಎಸ್ಕೇಪ್ ಆಗಿದ್ದಾಳೆ ಎನ್ನಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.