Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಔರಂಗಾದಾಬಾದ್: ತಂದೆ ಮತ್ತು ಮಲತಾಯಿಯನ್ನು ಕೊಲೆ ಮಾಡಿದ ಪುತ್ರ ಬಳಿಕ ಮಾಡಿದ್ದ ಕೃತ್ಯ ಪೊಲೀಸರೇ ಬೆಚ್ಚಿ ಬೀಳುವಂತಿತ್ತು.
ಡಬಲ್ ಮರ್ಡರ್ ಮಾಡಿದ ಮಗ ಇಬ್ಬರ ಮೃತದೇಹಗಳನ್ನೂ ಬೆಡ್ ಕೆಳಗೆ ಹಾಕಿ ಕೂತಿದ್ದ. ಸಹೋದರಿ ಆರೋಪಿಗೆ ಪದೇ ಪದೇ ಫೋನ್ ಕರೆ ಮಾಡಿದ್ದಾಗ ಆತ ಸ್ವೀಕರಿಸಲಿಲ್ಲ. ಇದರಿಂದ ಅನುಮಾನಗೊಂಡ ಆಕೆ ಮನೆಗೆ ಬಂದು ಇಣುಕಿ ನೋಡಿದ್ದಳು. ಈ ವೇಳೆ ಸಹೋದರನ ಕೃತ್ಯ ಬಯಲಾಗಿದೆ.
ಮದ್ಯದ ಅಮಲಿನಲ್ಲಿ ತಂದೆ ಮತ್ತು ಮಲತಾಯಿಯನ್ನು ಈತ ಗುಂಡಿಕ್ಕಿ ಕೊಲೆ ಮಾಡಿರುವುದು ತಿಳಿದುಬಂದಿದೆ. ಇದೀಗ ಆರೋಪಿಯನ್ನು ಬಂಧಿಸಿರುವ ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿದ್ದಾರೆ.