Publish Date: Thu, 15 Nov 2018 (15:42 IST)
Updated Date: Thu, 15 Nov 2018 (16:04 IST)
ನಟಿ ಶೃತಿ ಹರಿಹರನ್, ಸಂಜನಾ ಮೀ ಟೂ ಅಭಿಯಾನದಲ್ಲಿ ಹೇಳಿಕೆ ನೀಡಿ ಚರ್ಚೆಯಲ್ಲಿರುವಾಗಲೇ ನಟಿ ಶುಭಾ ಪೂಂಜಾ ಮೀ ಟೂ ಕುರಿತು ಹೇಳಿಕೆ ನೀಡಿದ್ದಾರೆ.
ಕನ್ನಡ ಫಿಲ್ಮ್ ಇಂಡಸ್ಟ್ರಿ ಬಹಳ ಒಳ್ಳೆ ಇಂಡಸ್ಟ್ರಿಯಾಗಿದೆ ಎಂದು ಸ್ಯಾಂಡಲ್ ವುಡ್ ನಾಯಕ ನಟಿ ಶುಭಾ ಪುಂಜಾ ಹೇಳಿಕೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮೀ ಟೂ ಬಗ್ಗೆ ಇರುವ ಆರೋಪ ಪ್ರತ್ಯಾರೋಪವನ್ನ ಚಲನಚಿತ್ರ ವಾಣಿಜ್ಯ ಮಂಡಳಿಯೇ ಬಗೆ ಹರಿಸುತ್ತದೆ. ಕನ್ನಡ ಫಿಲ್ಮ್ ಇಂಡಸ್ಟ್ರಿಯಲ್ಲಿ ನಾನು 10-12 ವರ್ಷದಿಂದ ಇದ್ದೇನೆ. ನಿರ್ದೇಶಕರು, ನಿರ್ಮಾಪಕರು ಹಾಗೂ ಅಭಿಮಾನಿಗಳಿಂದ ಪ್ರೀತಿ, ಗೌರವ ಸಿಕ್ಕಿದೆ. ಹೀಗಾಗಿ ಕನ್ನಡ ಇಂಡಸ್ಟ್ರಿಯಲ್ಲಿ ನನಗೆ ಯಾವುದೇ ಕಹಿ ಅನುಭವ ಆಗಿಲ್ಲ ಎಂದಿದ್ದಾರೆ.
ಎಲ್ಲ ರಂಗಗಳಲ್ಲೂ ಮೀ ಟೂ ದಂತಹ ಕಹಿ ಅನುಭವಗಳು ಆಗುತ್ತವೆ. ಕಹಿ ಅನುಭವ ಆಗಿರೋರು ಧ್ವನಿ ಎತ್ತುತ್ತಿದ್ದಾರೆ.
ಇದಕ್ಕೆಲ್ಲ ನಮ್ಮ ಸಿನಿ ರಂಗದ ಹಿರಿಯರು ಪರಿಹಾರ ಕಂಡುಕೊಳ್ಳುತ್ತಿದ್ದಾರೆ. ಇಂಥವುಗಳೆಲ್ಲ ವೈಯಕ್ತಿಕ ವಿಚಾರ. ಆದ್ರೆ ವೈಯಕ್ತಿಕವಾಗಿ ನನಗೆ ಈ ತರಹದ ಅನುಭವ ಆಗಿಲ್ಲ ಎಂದು ನಟಿ ಶುಭಾ ಪೂಂಜಾ ಹೇಳಿದ್ದಾರೆ.