Publish Date: Mon, 30 Dec 2019 (20:24 IST)
Updated Date: Mon, 30 Dec 2019 (20:26 IST)
ನಶೆಯ ಗುಂಗಿನಲ್ಲಿದ್ದ ಗೆಳೆಯರು ತಮ್ಮ ಕುಚುಕು ಗೆಳೆಯನಿಗೆ ಮಾಡಬಾರದ ಕೆಲಸ ಮಾಡಿದ್ದಾರೆ.
ಮದ್ಯದ ನಶೆಯಲ್ಲಿ ನಡೆದ ಗಲಾಟೆಯಲ್ಲಿ ಸ್ನೇಹಿತರಿಬ್ಬರು ತಮ್ಮ ಆಪ್ತ ಗೆಳೆಯನನ್ನೇ ಕೊಲೆ ಮಾಡಿರೋ ಘಟನೆ ನಡೆದಿದೆ.
ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಘಟನೆ ನಡೆದಿದ್ದು, ಇರ್ಫಾನ್ ಎಂಬಾತ ಕೊಲೆಯಾಗಿದ್ದರೆ, ಗೆಳೆಯರಾದ ಮಲ್ಲೇ, ಶಕ್ತಿವೇಲು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ನಿತ್ಯವೂ ಒಂದೇ ಟೇಬಲ್ ಮೇಲೆ ಕುಳಿತು ಈ ಮೂವರು ಕುಡಿಯುತ್ತಿದ್ದರಂತೆ. ಇದೀಗ ನಶೆಯಲ್ಲಿ ನಡೆದ ಜಗಳದಲ್ಲಿ ಕುಚುಕು ಗೆಳೆಯನ ಕಥೆಯನ್ನು ಗೆಳೆಯರೇ ಫಿನಿಷ್ ಮಾಡಿದ್ದಾರೆ.
ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.