Webdunia - Bharat's app for daily news and videos

Install App

ಹುಟ್ಟುಹಬ್ಬದಂದೇ ಕೊಲೆಯಾದ ಯುವಕ .."!

Webdunia
ಭಾನುವಾರ, 24 ಜುಲೈ 2022 (15:36 IST)
ಹುಟ್ಟುಹಬ್ಬದಂದೇ ಬರ್ಬರವಾಗಿ ಕೊಲೆಯಾದ ಯುವಕ ಹೇಮಂತ್ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಹೇಮಂತ್ ಕೊಲೆ ಹಿಂದೆ ಕುಖ್ಯಾತ ಪಾತಕಿಯ ಕೈವಾಡ...
 
ಬರ್ತಡೇ ಸೆಲೆಬ್ರೇಷನ್​ಗೆ‌ ಅಂತ ಸಮೀಪದ ಡಾಬಾ ವೊಂದಕ್ಕೆ ಹೋಗಿದ್ದರು. ಆ ವೇಳೆ ಹೇಮಂತ್ ಹಾಗೂ ಆತನ‌ ಸ್ನೇಹಿತ್ರ ಮಧ್ಯೆ ಬೆಂಗಳೂರಿನ‌ ರೌಡಿಸಂ ಬಗ್ಗೆ ಚರ್ಚೆ ಶುರುವಾಗಿತ್ತು, ಮಚ್ಚಾ ಬೆಂಗಳೂರಲ್ಲಿ ಯಾರು ಹೇಳಿಕೊಳ್ಳುವಂತ ರೌಡಿಗಳಿಲ್ಲ. ಎಲ್ಲ ಪುಡಿರೌಡಿಗಳೇ ಅಂತ ಮಾತನಾಡಿಕೊಂಡಿದ್ದಾರೆ. ಈ ಮಾತುಗಳು ಪಕ್ಕದಲ್ಲೇ ಇದ್ದ ನಟೋರಿಯಸ್ ರೌಡಿ ಕುಳ್ಳು ರಿಜ್ವಾನ್‌ ಶಿಷ್ಯರ ಕಿವಿಗೆ ಬಿದ್ದಿದೆ. ಆದ್ರೂ ಸುಮ್ಮನಿದ್ದ ರಿಜ್ವಾನ್ ಸಹಚರರು ಪಾರ್ಟಿ ಮುಗಿಸಿ ಹೇಮಂತ್ ಸ್ನೇಹಿತರು ತಮ್ಮ ತಮ್ಮ ಮನೆಗಳಿಗೆ ಹೋಗ್ತಿದ್ದಂತೆ, ಹೇಮಂತ್ ತನಗರಿವಿಲ್ಲದಂತೆ ಆ ರೌಡಿಗಳ ಬಳಿಯೇ ಮನೆ ಹತ್ತಿರ ಎಲ್ಲಾದ್ರೂ ಡ್ರಾಪ್​ ಮಾಡುವಂತೆ ಕೇಳಿದ್ದಾನೆ.
 
ಅವರಿಗೂ ಅದೇ ಬೇಕಿತ್ತು. ನೈಸಾಗಿ ಹೇಮಂತ್ ನನ್ನ ಬೈಕ್‌ನಲ್ಲಿ ಕರೆದುಕೊಂಡು ಬಂದ ಆರೋಪಿಗಳು ಹೇಮಂತ್ ಜೊತೆ ಕಿರಿಕ್ ಶುರು ಮಾಡಿದ್ದಾರೆ. ನಮ್ ಬಾಸ್ ಕುಳ್ಳು ರಿಜ್ವಾನ್ ಗೊತ್ತಿಲ್ವೇನೋ ಅಂತ ಮದಿರೆ ನಿಶೆಯಲ್ಲಿ ಜಗಳ ತೆಗೆದಿದ್ದಾರೆ. ನಮ್ ಬಾಸ್ ಗೊತ್ತಿಲ್ಲ ಅಂತೀಯ. ನಿನಗೆ ಒಂದ್ ಗತಿ ಕಾಣಿಸ್ತೀವಿ ಅಂತೇಳಿ ಮಾರಕಾಸ್ತ್ರಗಳಿಂದ ಹೇಮಂತ್ ಮೇಲೆ ಹಲ್ಲೆ ಮಾಡಿದೆ. ಬಳಿಕ ಆತನ ಮುಖ ಗುರುತು ಸಿಗದಂತೆ ಮಚ್ಚಿನಿಂದ ಜಜ್ಜಿ ಬರ್ಬರವಾಗಿ ಹತ್ಯೆಗೈದಿದ್ದಾರೆ. ಕೊಲೆ ಮಾಡುವ ದೃಶ್ಯಗಳನ್ನು ಹಂತಕರೇ ಮೊಬೈಲ್‌ನಲ್ಲಿ ಸೆರೆ ಹಿಡಿದು, ಅದನ್ನು ಕುಳ್ಳು ರಿಜ್ವಾನ್ ಮೊಬೈಲ್‌ಗೆ ಕಳುಹಿಸಿದ್ದಾರೆ. ಬಾಸ್ ನೀವ್ ಗೊತ್ತಿಲ್ಲ ಅಂದಿದಕ್ಕೆ ಅವ್ನ ಕಥೆಯೇ ಮುಗಿಸ್ಬಿಟ್ವಿ ಅಂತ ಮೇಸೇಜ್ ಹಾಕಿದ್ರಂತೆ. ಕೆ.ಜಿ.ನಗರ ಪೊಲೀಸರು ಕುಳ್ಳು ರಿಜ್ವಾನ್ ನನ್ನನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ರಿಜ್ವಾನ್ ಮೊಬೈಲ್ ನಲ್ಲಿ ವಿಡಿಯೋ ಸಿಕ್ಕಾಗ ಈ ಸಂಗತಿ ಬೆಳಕಿಗೆ ಬಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಿರುಮಲ ದೇವಸ್ಥಾನಕ್ಕೆ ರಾಜಮಾತೆ ಪ್ರಮೋದಾ ದೇವಿಯಿಂದ ಎರಡು ದೀಪಗಳ ದೇಣಿಗೆ

ಧರ್ಮಸ್ಥಳ ಮೂಲದ ಆಕಾಂಕ್ಷ ಸಾವು ಪ್ರಕರಣ: ಸಮಗ್ರ ತನಿಖೆಗೆ ಸಚಿವ ಗುಂಡೂರಾವ್ ಆಗ್ರಹ

ನನ್ನ ಪಾಲಿನ ಎರಡನೇ ಅಂಬೇಡ್ಕರ್‌, ಸಿಎಂ ಸಿದ್ದರಾಮಯ್ಯನವರು: ಎಚ್‌ ಆಂಜನೇಯ ಗುಣಗಾನ

ಸಹಜ ಸ್ಥಿತಿಗೆ ಮರಲಿದ ಜಮ್ಮು ಕಾಶ್ಮೀರದ ಗಡಿಭಾಗದ ಪ್ರದೇಶಗಳು, ಶಾಲೆಗಳು ಮತ್ತೇ ಆರಂಭ

ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡಲು ಹೋಗಿ ಸಿಕ್ಕಿಬಿದ್ದವರ ಸಂಖ್ಯೆ ಕೇಳಿದ್ರೆ ಶಾಕ್ ಆಗ್ತೀರಾ

ಮುಂದಿನ ಸುದ್ದಿ
Show comments