Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಹುಬ್ಬಳ್ಳಿ, ಅ.16 : ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಸ್ಥಾನ ಉಳಿಸಿ ಕೊಳ್ಳಲು ಆರ್‍ಎಸ್‍ಎಸ್‍ನ್ನು ಹೊಗಳುತ್ತಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.
ನಗರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಮೂಲತಃ ಆರ್ಎಸ್ಎಸ್ ಅಲ್ಲ. ಅಲ್ಲಿ ಹೋಗಿ ಸೇರಿ ಕೊಂಡಿದ್ದಾರೆ. ಸಿಎಂ ಸ್ಥಾನ ಉಳಿಸಿ ಕೊಳ್ಳಬೇಕೆಂದರೆ ಆರ್ಎಸ್ಎಸ್ ಹೊಗಳಲೇ ಬೇಕಾದ ಅನಿವಾರ್ಯತೆಯಿದೆ ಎಂದರು.
ಬಿ.ಎಸ್.ಯಡಿಯೂರಪ್ಪ ಅವರನ್ನು ಸಿದ್ದರಾಮಯ್ಯ ಗೌಪ್ಯವಾಗಿ ಭೇಟಿಯಾಗಿದ್ದಾರೆ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದು ಅಪ್ಪಟ ಸುಳ್ಳು. ಅದನ್ನು ಸಾಬೀತುಪಡಿಸಿದರೆ ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ. ಯಡಿಯೂರಪ್ಪ ಆರೆಸ್ಸೆಸ್ನಿಂದ ಬಂದವರು. ನಾನು ಅವರು ಸೇರಲು ಸಾಧ್ಯವೇ ಇಲ್ಲ ಎಂದರು.
ಅಲ್ಲದೆ, ರಾಜಕೀಯವಾಗಿ ಆರೆಸ್ಸೆಸ್ ವಿರುದ್ಧ ಬೆಳೆದವನು ನಾನು. ಅಕಾರದಲ್ಲಿದ್ದವರ ಮನೆ ಬಾಗಿಲಿಗೆ ನಾ ಎಂದೂ ಹೋಗಿಲ್ಲ. ಕಾಂಗ್ರೆಸ್ ಜಾತ್ಯಾತೀತ, ಪ್ರಜಾಪ್ರಭುತ್ವಕ್ಕೆ ಬದ್ಧವಾಗಿರುವ ಪಕ್ಷ. ಬಿಜೆಪಿ ಇದಕ್ಕೆ ವಿರುದ್ಧವಾದ ಪಕ್ಷ ಎಂದರು.