Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಚೆನ್ನೈ: ಆಡುವ ವಯಸ್ಸಿನಲ್ಲಿ ಮಕ್ಕಳಲ್ಲಿ ಎಂತಹ ವಿಕೃತ ಯೋಚನೆಗಳು ಬರುತ್ತವೆ ಎನ್ನುವುದಕ್ಕೆ ಇತ್ತೀಚೆಗಿನ ಕೆಲವು ಘಟನೆಗಳೇ ಸಾಕ್ಷಿ. ತಮಿಳುನಾಡಿನಲ್ಲಿ ಇದೀಗ ಅಂತಹದ್ದೇ ಘಟನೆಯೊಂದು ನಡೆದಿದೆ.
14 ವರ್ಷದ ಅಪ್ರಾಪ್ತನೊಬ್ಬ ತನ್ನ ನೆರೆಮನೆಯ 4 ವರ್ಷದ ಹೆಣ್ಣು ಮಗುವನ್ನು ಆಡುವ ನೆಪದಲ್ಲಿ ಮನೆಗೆ ಕರೆದು ಯಾರೂ ಇಲ್ಲದ ಜಾಗದಲ್ಲಿ ಲೈಂಗಿಕವಾಗಿ ದೌರ್ಜನ್ಯ ನಡೆಸಿದ ಘಟನೆ ನಡೆದಿದೆ.
ಮನೆಗೆ ಬಂದ ಮೇಲೆ ಮಗುವಿಗೆ ಸ್ನಾನ ಮಾಡಿಸುವಾಗ ಖಾಸಗಿ ಅಂಗಾಂಗ ನೋವಾಯಿತೆಂದು ಜೋರಾಗಿ ಅತ್ತಾಗ ವಿಚಾರ ಬೆಳಕಿಗೆ ಬಂದಿದೆ. ಬಳಿಕ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಈ ಸಂಬಂಧ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ.