Publish Date: Wed, 04 Oct 2023 (15:44 IST)
Updated Date: Wed, 04 Oct 2023 (15:47 IST)
ಕೆ.ಆರ್.ಮಾರ್ಕೆಟ್ ನಿಂದ ಚಾಮರಾಜಪೇಟೆಗೆ ತೆರಳುತ್ತಿದ್ದ ಬಸ್ ಬ್ರೇಕ್ ಫೇಲ್ಯೂರ್ ಆಗಿ ಡಿವೈಡರ್'ಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ.ಮಾರ್ಕೆಟ್ ಫ್ಲೈ ಓವರ್ ಮೇಲೆ ಬೆಳಗ್ಗೆ 7:10 ರ ಸುಮಾರಿಗೆ ಘಟನೆ ನಡೆದಿದೆ.ಬಸ್ ನಲ್ಲಿ ಯಾವೊಬ್ಬ ಪ್ರಯಾಣಿಕರು ಸಹ ಇರಲಿಲ್ಲ.ಬಸ್ ನಲ್ಲಿದ್ದ ಚಾಲಕ ನಿರ್ವಾಹಕ ಅದೃಷ್ಟವಶಾತ್ ಬಚಾವ್ ಆಗಿದ್ದಾನೆ.ಚಿಕ್ಕಪೇಟೆ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಸ್ಥಳಕ್ಕೆ ಬಿಎಂಟಿಸಿ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಸದ್ಯ ಬಸ್ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿದ್ದಾರೆ.ಬ್ರೇಕ್ ಫೇಲ್ಯೂರ್ ಆಗಿ ಅಪಘಾತ ಸಂಭವಿಸಿರೋದು ಬೆಳಕಿಗೆ ಬಂದಿದೆ.