Publish Date: Thu, 17 Oct 2019 (18:57 IST)
Updated Date: Thu, 17 Oct 2019 (19:00 IST)
ಏಕಾಂತದಲ್ಲಿರೋ ವಿಡಿಯೋ ಇಟ್ಟುಕೊಂಡು ಸಿದ್ದಾರೂಢ ಮಠದ ಟ್ರಸ್ಟ್ ಸದಸ್ಯರಿಗೆ ಬ್ಲ್ಯಾಕ್ ಮೇಲ್ ಮಾಡಿರೋ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.
ಶ್ರೀ ಸಿದ್ದಾರೂಢ ಸ್ವಾಮಿಮಠದ ಟ್ರಸ್ಟ್ ಕಮೀಟಿಯ ಮಹಿಳಾ ಧರ್ಮದರ್ಶಿ ವಿಜಯಲಕ್ಷ್ಮೀ ವಿ.ಪಾಟೀಲ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇದರಿಂದಾಗಿ ಬ್ಲ್ಯಾಕ್‌ಮೇಲ್ ಪ್ರಕರಣದಲ್ಲಿ ಸಿಲುಕಿದ್ದ ಶ್ರೀ ಮಠದ ಟ್ರಸ್ಟ್ ನ ಇಬ್ಬರು ಪದಾಧಿಕಾರಿಗಳು ರಾಜೀನಾಮೆ ಸಲ್ಲಿಸಿದಂತಾಗಿದೆ. ಟ್ರಸ್ಟ್ ಕಮೀಟಿಯ ಪದಾಧಿಕಾರಿಗಳ ಸಭೆಯಲ್ಲಿ ಧರ್ಮದರ್ಶಿ ವಿಜಯಲಕ್ಷ್ಮಿ ಗೈರಾಗಿದ್ದರು.
ಅಂದು ಟ್ರಸ್ಟ್ ನ ಉಪಾಧ್ಯಕ್ಷ ಡಾ.ಬಸವರಾಜ ವಿ. ಸಂಕನಗೌಡರ ವೈಯಕ್ತಿಕ ಕಾರಣಾಂತರಗಳಿಂದ ಅಧ್ಯಕ್ಷರಿಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ವಿಜಯಲಕ್ಷ್ಮಿ ಅವರು ತಮ್ಮ ಪತಿಯೊಂದಿಗೆ ಶ್ರೀಮಠದ ಟ್ರಸ್ಟ್ ನ ಮುಖ್ಯ ಆಡಳಿತಾಧಿಕಾರಿ ಆಗಿರುವ ಜಿಲ್ಲಾ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರನ್ನು ನೇರವಾಗಿ ಭೇಟಿಯಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇವರಿಬ್ಬರ ರಾಜೀನಾಮೆ ಪತ್ರಗಳನ್ನು ಟ್ರಸ್ಟ್ ನ ಆಡಳಿತಾಧಿಕಾರಿ ಅಂಗೀಕರಿಸಿದ್ದಾರೆ ಎನ್ನಲಾಗಿದೆ.