ನವದೆಹಲಿ : ನಿವೃತ್ತಿ ನಂತರ ತಮ್ಮ ಪಿಎಫ್ ಹಣ ನಿರೀಕ್ಷಿಸುತ್ತಿರುವ ಭಾರತೀಯರಿಗೆ ಪ್ರಾವಿಡಂಟ್ ಅಂಡ್ ಪೆನ್ಷನ್ ಫಂಡ್ ಟ್ರಸ್ಟ್ ಕಡೆಯಿಂದ ಶಾಕಿಂಗ್ ಸುದ್ಧಿಯೊಂದು ಕೇಳಿಬಂದಿದೆ.
ಪ್ರಾವಿಡಂಟ್ ಅಂಡ್ ಪೆನ್ಷನ್ ಫಂಡ್ ಟ್ರಸ್ಟ್ ಭಾರತೀಯರ ಸಾವಿರಾರು ಕೋಟಿ ರೂಪಾಯಿ ಪಿಎಫ್ ಹಣವನ್ನು IL&FS ಗ್ರೂಪ್ನಲ್ಲಿ ಹೂಡಿಕೆ ಮಾಡಿದೆ. ಆದರೆ ಟ್ರಸ್ಟ್ ಹೂಡಿದ ಈ ಹಣ ಅಸುರಕ್ಷಿತ ಸಾಲದ ಸಾಲಿಗೆ ಸೇರಿದ ಹಿನ್ನಲೆಯಲ್ಲಿ ಟ್ರಸ್ಟ್ ತನ್ನೆಲ್ಲ ಹಣವನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ.
ಒಂದು ವೇಳೆ ಟ್ರಸ್ಟ್ ತನ್ನೆಲ್ಲ ಹಣವನ್ನು ಕಳೆದುಕೊಂಡರೆ ಹಲವಾರು ಪಿಎಫ್ ದಾರರು ಸಂಕಷ್ಟಕ್ಕೆ ಸಿಲುಕುತ್ತಾರೆ. ಈ ಕುರಿತಂತೆ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ವಿಚಾರಣ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದೆ ಎಂದು ತಿಳಿದು ಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.